ಪ್ರಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರು ಇಸ್ಲಾಂ ವಿರೋಧಿ ಹೇಳಿಕೆ ನೀಡಿದ್ದಾರೆ ಎನ್ನಲಾಗುವ ಟ್ವೀಟ್ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಎಲ್ಲ ಧರ್ಮಗಳು ಹಾಗೂ ಸಂಸ್ಕೃತಿ ನಾಶವಾಗುವವರೆಗೆ ಅಥವಾ ಎಲ್ಲರೂ ಮತಾಂತರ ಆಗುವವರೆಗೆ ಇಸ್ಲಾಂ ವಿರಮಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಇಡೀ ಜಗತ್ತಿಗೆ ನೀಡಲು ಬಯಸುತ್ತೇನೆ’ ಎಂಬುದಾಗಿ ರಶ್ದಿ ಹೇಳಿದ್ದಾರೆ ಎನ್ನಲಾಗಿದೆ. @Lokakas ಹೆಸರಿನ ಟ್ವಿಟರ್ ಖಾತೆಯಲ್ಲಿ ರಶ್ದಿ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ. ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ರಶ್ದಿ ಅವರ ಚಿತ್ರವೂ ಇದೆ. ಆದರೆ ಇದು ರಶ್ದಿ ಅವರ ಹೇಳಿಕೆ ಅಲ್ಲ.

ಸಲ್ಮಾನ್ ರಶ್ದಿ ಅವರು ಇಸ್ಲಾಂ ವಿರೋಧಿ ಹೇಳಿಕೆ ನೀಡಿಲ್ಲ ಎಂದು ‘ಪಿಟಿಐ’ ಸುದ್ದಿಸಂಸ್ಥೆಯು ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ರಶ್ದಿ ಅವರು ಸ್ವತಃ ಟ್ವೀಟ್ ಮಾಡಿದ್ದು, ‘ನಾನು ಈ ಹೇಳಿಕೆ ನೀಡಿಲ್ಲ, ಇದು ನನ್ನದಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ರಶ್ದಿ ಅವರು ಇಸ್ಲಾಂ ವಿರೋಧಿ ಹೇಳಿಕೆ ನೀಡಿರುವ ಯಾವ ಮಾಹಿತಿಯೂ ಗೂಗಲ್ನಲ್ಲಿ ಸಿಗಲಿಲ್ಲ ಎಂದು ಪಿಟಿಐ ತಿಳಿಸಿದೆ. ರಶ್ದಿ ಅವರು ಕಳೆದ ಆಗಸ್ಟ್ನಲ್ಲಿ ನ್ಯೂಯಾರ್ಕ್ನಲ್ಲಿ ಭಾಷಣ ಮಾಡುವ ವೇಳೆ ದಾಳಿಗೆ ಒಳಗಾಗಿದ್ದರು. ಒಂದು ಕಣ್ಣಿನ ದೃಷ್ಟಿ ನಷ್ಟವಾಗಿತ್ತು. ದಾಳಿಯಲ್ಲಿ ಒಂದು ಕೈಗೆ ಗಂಭೀರ ಗಾಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.