ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ನಡೆದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಔಟಾದಾಗ ಛಾಯಾಗ್ರಾಹಕರೊಬ್ಬರುಕಣ್ಣೀರಿಡುತ್ತಿರುವುದು ಎಂಬ ಬರಹದೊಂದಿಗೆ ಕೆಲವು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಆದರೆ ಆ ಫೋಟೊದಲ್ಲಿರುವ ಛಾಯಾಗ್ರಾಹಕನಿಗೂ- ವಿಶ್ವಕಪ್ ಕ್ರಿಕೆಟ್ಪಂದ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಈ ಬಗ್ಗೆ ಫ್ಯಾಕ್ಟ್ಚೆಕ್ ಮಾಡಿದ ಬೂಮ್ ಲೈವ್ ವರದಿ ಮಾಡಿದೆ.

ಫ್ಯಾಕ್ಟ್ಚೆಕ್
ಕ್ಯಾಮೆರಾದಲ್ಲಿ ಕಣ್ಣಿಟ್ಟು ಫೋಕಸ್ ಮಾಡುತ್ತಾ ಛಾಯಾಗ್ರಾಹಕಕಣ್ಣೀರಿಡುತ್ತಿರುವ ಚಿತ್ರವಾಗಿತ್ತು ಅದು.ಆ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈತ ಇರಾಕ್ ದೇಶದ ಫೋಟೊಗ್ರಾಫರ್ ಆಗಿದ್ದು, ಫುಟ್ಬಾಲ್ ಪಂದ್ಯದ ವೇಳೆ ಅಳುತ್ತಿದ್ದ ದೃಶ್ಯವಾಗಿದೆ ಅದು.2019 ಜನವರಿಯಲ್ಲಿ ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕತಾರ್ ತಂಡ ಇರಾಕ್ ತಂಡವನ್ನು 1-0 ಗೋಲುಗಳಿಂದ ಪರಾಭವಗೊಳಿಸಿದಾಗ, ಪಂದ್ಯದ ದೃಶ್ಯ ಸೆರೆ ಹಿಡಿಯುತ್ತಿದ್ದ ಇರಾಕ್ನ ಛಾಯಾಗ್ರಾಹಕ ಕಣ್ಣೀರಿಟ್ಟಿದ್ದಾರೆ.

ಫಾಕ್ಸ್ ಸ್ಫೋರ್ಟ್ಸ್ ಏಷ್ಯಾ ವರದಿ ಪ್ರಕಾರ ಈ ಛಾಯಾಗ್ರಾಹಕನ ಹೆಸರು ಮೊಹಮ್ಮದ್ ಅಲ್ ಅಸ್ಸಾವಿ.

ವೈರಲ್ ಆಗಿರುವ ಫೋಟೊಮತ್ತು ಅಲ್ ಅಸ್ಸಾವಿ ಅವರ ಫೋಟೊವನ್ನು ತುಲನೆ ಮಾಡಿನೋಡಿದಾಗ ಫೋಟೊದಲ್ಲಿರುವ ಛಾಯಾಗ್ರಾಹಕ ಅಲ್ ಅಸ್ಸಾವಿಯೇ ಎಂದಿದೆ ಬೂಮ್ ಲೈವ್ ವರದಿ.

ಕಣ್ಣೀರಿಡುತ್ತಿರುವ ಫೋಟೊ ವೈರಲ್ ಆಗಿದ್ದಾಗಅಲ್ ಅಸ್ಸಾವಿ ಆರ್ಟಿ ಅರೇಬಿಕ್ಗೆ ನೀಡಿದ ಸಂದರ್ಶನ ಇಲ್ಲಿದೆ.

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕಾಲಿನ ಕೆಳಗೆ ಮದ್ಯ ಬಾಟಲಿ?- ಫ್ಯಾಕ್ಟ್ಚೆಕ್
ಭಾರತೀಯ ಕ್ರಿಕೆಟ್ ಆಟಗಾರರೊಂದಿಗೆ ಕೋಚ್ ರವಿಶಾಸ್ತ್ರಿ ಕುಳಿತುಕೊಂಡಿರುವ ಗ್ರೂಪ್ ಫೋಟೊದಲ್ಲಿ ರವಿ ಶಾಸ್ತ್ರಿಕಾಲಿನ ಕೆಳಗೆ ಮದ್ಯ ಬಾಟಲಿ! - ಹೀಗೊಂದು ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಆದರೆ ಇದು ಫೋಟೊಶಾಪ್ ಮಾಡಿದ ಚಿತ್ರ ಎಂದು ಬೂಮ್ ಲೈವ್ ವರದಿ ಮಾಡಿದೆ.

ಫ್ಯಾಕ್ಟ್ಚೆಕ್
ರವಿಶಾಸ್ತ್ರಿಯನ್ನೊಳಗೊಂಡಿರುವ ಟೀಂ ಇಂಡಿಯಾದ ಗ್ರೂಪ್ ಫೋಟೊದಲ್ಲಿ ರವಿಶಾಸ್ತ್ರಿ ಕಾಲಿನ ಪಕ್ಕಜ್ಯಾಕ್ ಡ್ಯಾನಿಯಲ್ಸ್ ವಿಸ್ಕಿ ಬಾಟಲಿ ಇರುವ ಚಿತ್ರ ವಾಟ್ಸ್ಆ್ಯಪ್, ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಹರಿದಾಡಿತ್ತು.

ಈ ಫೋಟೊ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ಚೆಕ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಫೋಟೊ ಫೋಟೊಶಾಪ್ ಮಾಡಿದ್ದಾಗಿದೆ.

ವೈರಲ್ ಫೋಟೊವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಜುಲೈ 6, 2019ರಂದು ಬಿಸಿಸಿಐ ಟ್ವೀಟ್ ಮಾಡಿದ ಒರಿಜಿನಲ್ ಫೋಟೊ ಸಿಕ್ಕಿದೆ. ಈ ಫೋಟೊದಲ್ಲಿ ರವಿಶಾಸ್ತ್ರಿ ಕಾಲಿನ ಬಳಿ ಬಾಟಲಿ ಏನೂ ಇಲ್ಲ.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡದ ವಿರುದ್ದದ ಪಂದ್ಯಕ್ಕೆ ಮುನ್ನ ಕ್ಲಿಕ್ಕಿಸಿದ ಟೀಂ ಇಂಡಿಯಾದ ಗ್ರೂಪ್ ಫೋಟೊ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.