ಕೋವಿಡ್–19ಕ್ಕೆ ಪತಂಜಲಿ ಶೋಧಿಸಿದ ಕೊರೊನಿಲ್ ಔಷಧಿಯನ್ನು ಮಾರುಕಟ್ಟೆಗೆ ಬಿಡದಂತೆ ತಡೆದಿರುವುದು ಆಯುಷ್ ಸಚಿವಾಲಯದಲ್ಲಿರುವ ಡಾ. ಮುಜಾಹಿದ್ ಹುಸೇನ್ ಎಂಬ ಅಧಿಕಾರಿ. ಪತಂಜಲಿ ಔಷಧಿಗೂ ಆಯುರ್ವೇದಕ್ಕೂ ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಡಾ. ಮುಜಾಹಿದ್ ಅವರು ‘ಕೊರೊನಿಲ್’ ಮಾರಾಟಕ್ಕೆ ಅನುಮತಿ ನೀಡಲು ನಿರಾಕರಿಸಿದ್ದರು. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವಿಎಚ್ಪಿ ವಕ್ತಾರ ವಿಜಯ್ ಶಂಕರ್ ತಿವಾರಿ ಟ್ವೀಟ್ ಮಾಡಿದ್ದು, ಈ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಸ್ತವವಾಗಿ ಆಯುಷ್ ಸಚಿವಾಲಯದಲ್ಲಿ ಡಾ. ಮುಜಾಹಿದ್ ಹುಸೇನ್ ಎಂಬ ಅಧಿಕಾರಿ ಇಲ್ಲ. ಹೀಗಾಗಿ ಅಂತಹ ವ್ಯಕ್ತಿ ‘ಕೊರೊನಿಲ್’ ಮಾರಾಟಕ್ಕೆ ತಡೆ ಆದೇಶ ನೀಡಿದ್ದರು ಎಂಬ ಮಾಹಿತಿಯಲ್ಲಿಯೂ ಯಾವುದೇ ಹುರುಳಿಲ್ಲ. ಮೊದಲಿನ ಎರಡು ಮಾಹಿತಿಗಳು ಸುಳ್ಳು ಎನ್ನುವುದು ನಿರೂಪಿತವಾದ ಮೇಲೆ ಡಾ. ಹುಸೇನ್ ಎಂಬ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿರುವ ಮಾಹಿತಿಯೂ ಹಸಿ ಸುಳ್ಳಿನಿಂದ ಕೂಡಿದೆ ಎಂದು ಆಲ್ಟ್ನ್ಯೂಸ್ ವರದಿ ಮಾಡಿದೆ. ಈ ಮಧ್ಯೆ ನಮ್ಮ ಸಚಿವಾಲಯದಿಂದ ಯಾವುದೇ ಸಿಬ್ಬಂದಿಯನ್ನೂ ಅಮಾನತು ಮಾಡಿಲ್ಲ ಎಂದು ಆಯುಷ್ ಸಚಿವಾಲಯವೂ ಸ್ಪಷ್ಟಪಡಿಸಿದೆ. ಇಷ್ಟೆಲ್ಲ ಆದ ಬಳಿಕ ವಿಜಯ್ ಶಂಕರ್ ತಿವಾರಿ ಅವರು ತಮ್ಮ ಟ್ವೀಟ್ಅನ್ನು ಅಳಿಸಿಹಾಕಿದ್ದಾರೆ. ಅಷ್ಟರಲ್ಲಿ ಅವರ ಟ್ವೀಟ್ ಸಾವಿರಾರು ಬಾರಿ ಮರು ಟ್ವೀಟ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.