ಕೊಲ್ಲಂ: ಕೇರಳದಲ್ಲಿ ಸಾಕ್ಷರತಾಅಭಿಯಾನ ಚುರುಕಾಗಿದ್ದು105ರ ಹರೆಯದ ಭಾಗೀರಥಿ ಅಮ್ಮ 4ನೇ ತರಗತಿ ತತ್ಸಮಾನ ಪರೀಕ್ಷೆ ಬರೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಕೇರಳದಲ್ಲಿ ತರಗತಿಗೆ ಹಾಜರಾದ ಅತೀ ಹಿರಿಯ ವಯಸ್ಸಿನ ಮಹಿಳೆಯಾಗಿದ್ದಾರೆ ಭಾಗೀರಥಿ ಅಮ್ಮ. ಇವರಿಗೆ 6 ಮಕ್ಕಳು ಮತ್ತು 16 ಮೊಮ್ಮಕ್ಕಳು ಇದ್ದಾರೆ.

ತಮ್ಮ ಕಿರಿಯ ಸಹೋದರ ಸಹೋದರಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದಾಗಿ ಭಾಗೀರಥಿ ಅಮ್ಮನಿಗೆ 9ನೇ ವಯಸ್ಸಿನಲ್ಲಿ ಶಿಕ್ಷಣ ನಿಲ್ಲಿಸಬೇಕಾಗಿ ಬಂದಿತ್ತು. ರಾಜ್ಯ ಸಾಕ್ಷರತಾ ಅಭಿಯಾನದ ಅಧಿಕಾರಿಗಳು ಭಾಗೀರಥಿ ಅವರನ್ನು ಭೇಟಿಯಾದಾಗ ಈಕೆಕಲಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಕೇರಳ ಸಾಕ್ಷರತಾ ಪರೀಕ್ಷೆ: 96 ವರ್ಷದ ಅಜ್ಜಿಗೆ 98 ಅಂಕ!

ಭಾಗೀರಥಿ ಅಮ್ಮ ಎಲ್ಲ ಪರೀಕ್ಷೆಗಳಿಗೆ ಹಾಜರಾಗಿದ್ದು, ಕಲಿಯುವವರಿಗೆ ಇದು ನಿಜವಾದ ಸ್ಫೂರ್ತಿ ಎಂದು ರಾಜ್ಯ ಸಾಕ್ಷರತಾ ಅಭಿಯಾನದ ಜಿಲ್ಲಾ ಸಂಯೋಜಕ ಸಿ.ಕೆ ಪ್ರದೀಪ್ ಕುಮಾರ್ ಹೇಳಿದ್ದಾರೆ.

ಕೇರಳ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಕೇರಳ ರಾಜ್ಯ ಸಾಕ್ಷರತಾ ಮಿಷನ್ ರಾಜ್ಯದಾದ್ಯಂತವಿರುವ ಜನರಿಗೆ ಕಲಿಯಲು ಪ್ರೇರಣೆ ನೀಡುತ್ತದೆ. ಓದಲು, ಬರೆಯಲು ಗೊತ್ತಿಲ್ಲದ ಜನರಿಗೆ, ಅರ್ಧದಲ್ಲಿ ಶಾಲಾ ಶಿಕ್ಷಣ ತೊರೆದವರಿಗೆ ಇದು ಜ್ಞಾನಾರ್ಜನೆಯ ಅವಕಾಶವನ್ನು ಕಲ್ಪಿಸುತ್ತದೆ.

ಇದನ್ನೂ ಓದಿ:96ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಸ್ಫೂರ್ತಿಯಾದ ಕೇರಳದ ಮಹಿಳೆ!

ಕಳೆದ ವರ್ಷ ಕೇರಳ ಸಾಕ್ಷರಕಾ ಅಭಿಯಾನದಲ್ಲಿ ಭಾಗವಹಿಸಿದ್ದ 96 ವರ್ಷದ ಮಹಿಳೆ ಪರೀಕ್ಷೆಯಲ್ಲಿ ಶೇ.98 ಅಂಕ ಗಳಿಸಿ ದಾಖಲೆ ಬರೆದಿದ್ದರು. ಕೇರಳದಲ್ಲಿ ಶೇ.90ಕ್ಕಿಂತ ಹೆಚ್ಚು ಮಂದಿ ಸಾಕ್ಷರರಾಗಿದ್ದು, ದೇಶದಲ್ಲಿ ಅತೀ ಹೆಚ್ಚು ಸಾಕ್ಷರರನ್ನು ಹೊಂದಿರುವ ರಾಜ್ಯ ಕೇರಳವಾಗಿದೆ.

ಇದನ್ನೂ ಓದಿ:ಕೇರಳ: ರ್ಯಾಂಕ್ ಗಳಿಸಿದ್ದ 96ರ ಅಜ್ಜಿಗೆ ಸಚಿವರಿಂದ ಲ್ಯಾಪ್ಟ್ಯಾಪ್ ಕೊಡುಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.