ಉಜ್ಜೈನಿ: ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಹದಿನಾಲ್ಕು ವರ್ಷದ ಬಾಲಕನನ್ನು ಎರಡು ವರ್ಷಗಳವರೆಗೆ ಬಾಲ ನ್ಯಾಯ ಮಂಡಳಿಗೆ ಕಳುಹಿಸಲಾಗಿದೆ. ಈ ಪ್ರಕರಣದ ವಿಚಾರಣೆ ಕೇವಲ ಏಳು ಗಂಟೆಯೊಳಗೆ ಮುಗಿದಿದ್ದು ವಿಶೇಷ.

ಬಾಲ ನ್ಯಾಯ ಮಂಡಳಿಯ ನ್ಯಾಯಧೀಶ ತ್ರಿಪಾಠಿ ಪಾಂಡೆ ಪ್ರಕರಣದ ವಿಚಾರಣೆ ನಡೆಸಿದರು.

ಆಗಸ್ಟ್ 15ರಂದು ಈ ಘಟನೆ ನಡೆದಿದ್ದು,ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಬಾಲಕ ಅತ್ಯಾಚಾರ ಎಸಗಿದ್ದ. ಬಾಲಕಿ ಪೋಷಕರ ಬಳಿ ನಡೆದ ಘಟನೆ ವಿವರಿಸಿದ್ದಳು. ಬಾಲಕನ ವಿರುದ್ಧ ದೂರು ದಾಖಲಾಗಿತ್ತು.

ಐದು ದಿನಗಳಲ್ಲಿಯೇ ಅಪರಾಧಿಗೆ ಶಿಕ್ಷೆ ನೀಡಲಾಗಿದೆ. ಸೋಮವಾರ ಬೆಳಿಗ್ಗೆ 10.45ಕ್ಕೆ ವಿಚಾರಣೆ ಪ್ರಾರಂಭವಾಯಿತು. ಸಂಜೆ 6 ಗಂಟೆಯೊಳಗೆ ತೀರ್ಪು ನೀಡಲಾಯಿತು ಎಂದುಸರ್ಕಾರಿ ವಕೀಲ ದೀಪೇಂದ್ರ ಮಾಲು ತಿಳಿಸಿದ್ದಾರೆ.

ಪ್ರಕರಣ ನಡೆದ ಐದು ದಿನಗಳಲ್ಲೇ ತೀರ್ಪು ಬಂದಿರುವುದು ಅಪ್ರಾಪ್ತ ನ್ಯಾಯಾಲಯದ ಇತಿಹಾಸದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತಿದೆ.

ಆತ್ಯಾಚಾರ ಮಾಡಿದ ಬಾಲಕನ ವಿರುದ್ಧ ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.

ಅತ್ಯಾಚಾರ: ಮರಣದಂಡನೆ

ಮಂದಸೌರ್,ಮಧ್ಯಪ್ರದೇಶ: ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಇಬ್ಬರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿ ಮಂಗಳವಾರ ಆದೇಶ ನೀಡಿದೆ.

ಇರ್ಫಾನ್ ಅಲಿಯಾಸ್ ಭೈಯು (20) ಹಾಗೂ ಆಸಿಫ್ (24) ಅಪರಾಧ ಎಸಗಿರುವುದು ಸಾಬೀತಾಗಿದ್ದು, ವಿಶೇಷ ನ್ಯಾಯಾಧೀಶರಾದ ನಿಶಾ ಗುಪ್ತಾ ಅವರು ಈ ತೀರ್ಪು ನೀಡಿದ್ದಾರೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಎರಡು ತಿಂಗಳ ಹಿಂದೆ (ಜೂನ್ 26) ಶಾಲೆಯ ಹೊರಗಡೆ ತಂದೆಗಾಗಿ ಕಾಯುತ್ತ ನಿಂತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದ ಅಪರಾಧಿಗಳು, ಬಾಲಕಿಯನ್ನು ಹತ್ಯೆ ಮಾಡಲು ಯತ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.