ನವದೆಹಲಿ: ದೇಶದಾದ್ಯಂತ ರೈಲ್ವೆ ಇಲಾಖೆಯ ಆಸ್ತಿಯಲ್ಲಿ ಅಂದರೆ ಪ್ಲಾಟ್‌ಫಾರ್ಮ್‌ಗಳು ಮತ್ತು ಯಾರ್ಡ್‌ಗಳಲ್ಲಿ 179 ಕಡೆ ಅಕ್ರಮವಾಗಿ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಈ ಕಟ್ಟಡಗಳಲ್ಲಿ ದೇವಸ್ಥಾನ ದರ್ಗಾಗಳು, ಮಸೀದಿಗಳು ಸೇರಿವೆ. ಹಲವು ವರ್ಷಗಳಿಂದ ಇವು ಅಸ್ತಿತ್ವದಲ್ಲಿವೆ ಎಂದು ಸಂಸತ್ತಿನಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ.

ಅಕ್ರಮ ನಿರ್ಮಾಣದ ಈ ಸಂಕೀರ್ಣಗಳ ತೆರವಿಗೆ ರೈಲ್ವೆ ಆಡಳಿತ ಮುಂದಾಗಿದೆ. ಇದಕ್ಕಾಗಿ ರೈಲ್ವೆ ಸುರಕ್ಷತಾ ದಳ (ಆರ್‌ಪಿಎಫ್), ಸ್ಥಳೀಯ ಆಡಳಿತ ಮತ್ತು ಸರ್ಕಾರಗಳ ನೆರವು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಈ ಅಕ್ರಮ ನಿರ್ಮಾಣಗಳಿಂದ ಇನ್ನಷ್ಟು ಭೂಮಿ ಅತಿಕ್ರಮಣವಾಗದಂತೆಯೂ ಇಲಾಖೆಯು ಕಟ್ಟೆಚ್ಚರ ವಹಿಸಿದೆ. ಇವುಗಳನ್ನು ತೆರವುಗೊಳಿಸಲು ರೈಲ್ವೆ ಇಲಾಖೆಯು ಮುಂದಾಗಿದ್ದರೂ ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ತೆರವುಗೊಳಿಸಲು ರಾಜ್ಯ ಸರ್ಕಾರಗಳ ನೆರವು ಹಾಗೂ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಧಾರ್ಮಿಕ ಕೇಂದ್ರಗಳ ಪ್ರಮುಖರ ಜೊತೆಗೆ ಸೌಹಾರ್ದಯುತವಾಗಿ ಚರ್ಚಿಸಿ ನಿರ್ಮಾಣಗಳನ್ನು ಸ್ಥಳಾಂತರಗೊಳಿಸಲು ಯತ್ನಿಸಲಾಗುತ್ತಿದೆ. ಹಾಗೂ ಹೊಸದಾಗಿ ಇಂತಹ ಯಾವುದೇ ನಿರ್ಮಾಣಗಳು ರೈಲ್ವೆ ಇಲಾಖೆಗೆ ಸೇರಿದ ಭೂಮಿಯಲ್ಲಿ ತಲೆಎತ್ತದಂತೆ ಇಲಾಖೆಯು ಎಚ್ಚರಿಕೆ ವಹಿಸುತ್ತಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.