ಪಂಪಾ: ಮಹಿಳಾ ಪತ್ರಕರ್ತೆ ಹಾಗೂ ಭಕ್ತೆಯೊಬ್ಬರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಿಗಿ ಪೊಲೀಸ್ ಭದ್ರತೆಯಲ್ಲಿ ತೆರಳುತ್ತಿದ್ದಾರೆ.

ಆಂಧ್ರಪ್ರದೇಶದ ಮೊಜೊ ಟಿವಿಯ ವರದಿಗಾರ್ತಿ ಕವಿತಾ ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತೆಯೊಬ್ಬರು ಪೊಲೀಸರ ಭದ್ರತೆಯಲ್ಲಿ ದೇವಸ್ಥಾನದತ್ತ ತೆರಳುತ್ತಿದ್ದಾರೆ. ಆ ಭಕ್ತೆಯ ಹೆಸರು ತಿಳಿದು ಬಂದಿಲ್ಲ. ಅವರು ಕಪ್ಪು ಉಡುಪು ಧರಿಸಿದ್ದು ಹೂವು, ತೆಂಗಿನ ಕಾಯಿ ಹಿಡಿದು ದೇವಾಲಯದತ್ತ ಸಾಗುತ್ತಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ದೇವಾಲಯದತ್ತ ಸಾಗುತ್ತಿರುವ ಇಬ್ಬರು ಮಹಿಳೆಯರಿಗೆ ಹಿರಿಯ ಪೊಲೀಸ್ ಅಧಿಕಾರಿ ಶ್ರೀಜಿತ್ ನೇತೃತ್ವದಲ್ಲಿನೂರಕ್ಕೂ ಹೆಚ್ಚು ಪೊಲೀಸರು ಭದ್ರತೆ ಒದಗಿಸಿದ್ದಾರೆ. 4 ರಿಂದ 5 ಕಿ.ಮೀ ದೂರ ಸಾಗಿ ದೇವಾಲಯ ತಲುಪಲ್ಲಿದ್ದಾರೆ ಎನ್ನಲಾಗಿದೆ.

ಪ್ರತಿಭಟನಾಕಾರರು ಕೂಡ ಇವರನ್ನು ಹಿಂಬಾಲಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.