ಇಂಫಾಲ್: ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯವಾಗುವುದಕ್ಕೂ ಮುನ್ನ ಮಣಿಪುರ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ನೂರಾರು ಮಹಿಳೆಯರು ಇಂಫಾಲ್ ಕಣಿವೆಯಾದ್ಯಂತ ಪಂಜಿನ ಮೆರವಣಿಗೆ ನಡೆಸಿದ್ದಾರೆ.

ಇಂಫಾಲ್ ಪಶ್ಚಿಮ ಹಾಗೂ ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ ಬುಧವಾರ ರಾತ್ರಿ 9.30ರ ಸುಮಾರಿಗೆ ಮೆರವಣಿಗೆ ನಡೆದಿದೆ.

'ಸರ್ಕಾರವು ರಾಜ್ಯದ ಪ್ರಾದೇಶಿಕ ಸಮಗ್ರತೆ ಕಾಪಾಡಲು ವಿಧಾನಸಭೆ ಅಧಿವೇಶದಲ್ಲಿ ನಿರ್ಣಯ ಅಂಗೀಕರಿಸಬೇಕು. ಅದನ್ನು ಮುಂಗಾರು ಅಧಿವೇಶನ ಮುಗಿಯುವ ಮುನ್ನ ಸಂಸತ್ತಿಗೆ ರವಾನಿಸಬೇಕು' ಎಂದು ಮಹಿಳೆಯರು ಆಗ್ರಹಿಸಿದ್ದಾರೆ.

ಮಣಿಪುರದಲ್ಲಿ ಮೇ 3ರಂದು ಹಿಂಸಾಚಾರ ಭುಗಿಲೆದ್ದ ಬಳಿಕ ಈವರೆಗೆ 150ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಾರು ಜನರು ವಸತಿ ಕಳೆದುಕೊಂಡಿದ್ದಾರೆ.

ಇವನ್ನೂ ಓದಿ
* ಬಿಜೆಪಿಗರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು: ರಾಹುಲ್ ಗಾಂಧಿ ಗುಡುಗು
* ಕೈಮುಗಿದು ಪ್ರಾರ್ಥಿಸುವೆ ಹಿಂಸೆ ನಿಲ್ಲಿಸಿ: ಕುಕಿ–ಮೈತೇಯಿ ಸಮುದಾಯಗಳಿಗೆ ಶಾ ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.