ಭುವನೇಶ್ವರ: ಡಾನಾ ಚಂಡಮಾರುತದ ಪರಿಣಾಮ ಒಡಿಶಾದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭದ್ರಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಲುಕಿಕೊಂಡಿದ್ದ 24 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಒಡಿಆರ್ಎಎಫ್) ಸಿಬ್ಬಂದಿ ಶನಿವಾರ ರಾತ್ರಿ ತಿಹಿಡಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಲಾ ಗೋಪಬಿಂಧ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಸೇರಿದಂತೆ 24 ಮಂದಿ ಮೋಟಾರು ದೋಣಿಗಳ ಸಹಾಯದಿಂದ ರಕ್ಷಿಸಲಾಗಿದೆ. ಸದ್ಯ ಅವರನ್ನು ನಿರಾಶ್ರಿತರ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.

ಸಾಲಂಡಿ ನದಿಯ ನೀರಿನಿಂದ ಗ್ರಾಮವು ಜಲಾವೃತಗೊಂಡಿದ್ದು, ಅವರು ಸಿಲುಕಿಕೊಂಡಿದ್ದರು. ಡಿಐಜಿ (ಪೂರ್ವ ವಲಯ) ಸತ್ಯಜಿತ್ ನಾಯಕ್ ಅವರ ನೇತೃತ್ದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
.ಒಡಿಶಾ, ಪ.ಬಂಗಾಳಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ: ಭಾರಿ ಮಳೆ, ಹಲವೆಡೆ ಭೂಕುಸಿತ.
ಡಾನಾ ಚಂಡಮಾರುತವು ಒಡಿಶಾದ ಧಾಮರ ಮತ್ತು ಭಿತರ್ಕನಿಕಾ ಪ್ರದೇಶಗಳ ನಡುವೆ ಭೂಮಿಗೆ ಅಪ್ಪಳಿಸಿದೆ. ಇದು ಭೂಮಿಗೆ ಅಪ್ಪಳಿಸುವ ಪ್ರಕ್ರಿಯೆಯು ಶುಕ್ರವಾರ ಮಧ್ಯರಾತ್ರಿ 12.05ಕ್ಕೆ ಆರಂಭವಾಗಿತ್ತು. ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಹಾಗೂ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ.

ಸದ್ಯ ‘ಡಾನಾ’ದ ತೀವ್ರತೆಯು ಕಡಿಮೆಯಾಗಿದ್ದು, ಒಡಿಶಾದ ಉತ್ತರ ಭಾಗದಿಂದ ಪಶ್ಚಿಮ ದಿಕ್ಕಿಗೆ ಚಂಡಮಾರುತ ಸಾಗುತ್ತಿದೆ. ಹೀಗೆ ಸಾಗುತ್ತ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆಯು ಇನ್ನಷ್ಟು ತಗ್ಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ಮಾಹಿತಿ ನೀಡಿದೆ.
.ಡಾನಾ ಚಂಡಮಾರುತ | 1.75 ಲಕ್ಷ ಎಕರೆ ಕೃಷಿ ಭೂಮಿ ಜಲಾವೃತ: ಒಡಿಶಾ ಸರ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.