ನವದೆಹಲಿ: ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ (NCW) 2023ರಲ್ಲಿ 28,811 ದೂರುಗಳನ್ನು ದಾಖಲಿಸಿದೆ. ಅವುಗಳಲ್ಲಿ ಸುಮಾರು 55 ಪ್ರತಿಶತದಷ್ಟು ದೂರುಗಳು ಉತ್ತರ ಪ್ರದೇಶದಿಂದ ಬಂದಿವೆ.

ಕೌಟುಂಬಿಕ ಹಿಂಸಾಚಾರವನ್ನು ಹೊರತುಪಡಿಸಿ, ಕಿರುಕುಳ ಹಾಗೂ ಘನತೆಗೆ ಧಕ್ಕೆ ಸಂಬಂಧ ಹೆಚ್ಚಿನ ಸಂಖ್ಯೆಯ ದೂರುಗಳನ್ನು(8,540) ಸ್ವೀಕರಿಸಲಾಗಿದೆ.

ಮಹಿಳಾ ಆಯೋಗದ ಪ್ರಕಾರ, 6,274 ಕೌಟುಂಬಿಕ ದೌರ್ಜನ್ಯದ ದೂರುಗಳು, 4,797 ವರದಕ್ಷಿಣೆ ಕಿರುಕುಳದ ದೂರುಗಳು, 2,349 ಹಿಂಸೆ ಕುರಿತು ದೂರುಗಳು, 1,618 ಮಹಿಳಾ ದೂರುಗಳ ವಿರುದ್ಧ ಪೊಲೀಸ್ ನಿರಾಸಕ್ತಿ ಮತ್ತು 1,537 ಅತ್ಯಾಚಾರ ಮತ್ತು ಅತ್ಯಾಚಾರದ ಯತ್ನದ ದೂರುಗಳು ದಾಖಲಾಗಿವೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ.

ಜತೆಗೆ 805 ಲೈಂಗಿಕ ಕಿರುಕುಳ, 605 ಸೈಬರ್ ಅಪರಾಧ, 472 ಹಿಂಬಾಲಿಸಿದ ಪ್ರಕರಣ ಹಾಗೂ 409 ಮರ್ಯಾದೆಗಾಗಿ ಹಲ್ಲೆ ದೂರುಗಳು ದಾಖಲಾಗಿವೆ ಎಂದು ಅದು ಹೇಳಿದೆ.

ಅಂಕಿಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೂರುಗಳು ಅಂದರೆ 16,109, ದೆಹಲಿಯಲ್ಲಿ 2,411, ಮಹಾರಾಷ್ಟ್ರದಲ್ಲಿ 1,343, ಬಿಹಾರದಲ್ಲಿ 1,312, ಮಧ್ಯಪ್ರದೇಶದಲ್ಲಿ 1,165, ಹರಿಯಾಣದಲ್ಲಿ 1,115, ರಾಜಸ್ಥಾನದಲ್ಲಿ 1,011, ತಮಿಳುನಾಡಿನಲ್ಲಿ 608, ಪಶ್ಚಿಮ ಬಂಗಾಳದಲ್ಲಿ 569 ಹಾಗೂ ಕರ್ನಾಟಕದಲ್ಲಿ 501 ದೂರುಗಳು ದಾಖಲಾಗಿವೆ.
.ಕೋವಿಡ್ ಲಾಕ್ಡೌನ್ ನಂತರ ಮಹಾರಾಷ್ಟ್ರದಲ್ಲಿ ಬಾಲ್ಯವಿವಾಹ ಹೆಚ್ಚಳ: ಮಹಿಳಾ ಆಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.