ಗುರುಗ್ರಾಮ : 'ನಿಮ್ಮ ವಾರ್ಡ್ ಸ್ವಚ್ಛವಾಗಿದೆಯೇ?' ಹಾಗಾದರೆ, ಆ ವಾರ್ಡ್ ಅಭಿವೃದ್ಧಿಗಾಗಿ ₹1 ಕೋಟಿ ಸಿಗಲಿದೆ. ನಗರದ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಬಹುಮಾನ ನೀಡುವ ಕ್ರಮವನ್ನು ಇಲ್ಲಿನ ವಿಭಾಗೀಯ ಕಮಿಷನರ್ ಆರ್.ಸಿ. ವಿಧಾನ್ ಅವರು ಕೈಗೊಂಡಿದ್ದಾರೆ. ಸತತವಾಗಿ ಎರಡು ತಿಂಗಳು ಸ್ವಚ್ಛತೆ ಕಾಪಾಡಿಕೊಳ್ಳುವ ವಾರ್ಡ್ವೊಂದಕ್ಕೆ ತಿಂಗಳಿಗೆ ₹1 ಕೋಟಿ ನೀಡುವುದಾಗಿ ವಿಧಾನ್ ಘೋಷಿಸಿದ್ದಾರೆ.

‘ತಿಂಗಳಮಟ್ಟಿಗೆ ವಾರ್ಡ್ವೊಂದು ಸ್ವಚ್ಛತೆ ಕಾಪಾಡಿಕೊಂಡಿದ್ದರೆ ಅಂಥ ವಾರ್ಡ್ಗೆ ₹50 ಲಕ್ಷ ನೀಡಲಾಗುವುದು. ಸ್ವಚ್ಛತೆಯ ಪರಿಶೀಲನೆಯನ್ನು ಸರ್ಕಾರದ ಅಡಿಯಲ್ಲಿ ಬರದ, ಸ್ವತಂತ್ರ ಸಂಸ್ಥೆಯೊಂದು ನಡೆಸಲಿದೆ’ ಎಂದು ವಿಧಾನ್ ಹೇಳಿದ್ದಾರೆ. ನಗರದ ಸ್ವಚ್ಛತೆ ಕುರಿತು ಪರಿಶೀಲನಾ ಸಭೆ ನಡೆಸುತ್ತಿದ್ದ ವೇಳೆ ಈ ಘೋಷಣೆ ಮಾಡಿದ್ದಾರೆ.

‘ಕಸ ಸಂಗ್ರಹದ ಕುರಿತು ಅಧಿಕಾರಿಗಳು ಕಾಲಕಾಲಕ್ಕೆ ಮನೆ ಮನೆಗೆ ತೆರಳಿ ನಿಗಾ ಇರಿಸಬೇಕು. ಕಸಗಳನ್ನು ಎಲ್ಲೆಂದರಲ್ಲಿ ಹಾಕದೆ, ನಿಗದಿತ ಸ್ಥಳದಲ್ಲಿಯೇ ಹಾಕುವ ವ್ಯವಸ್ಥೆ ಮಾಡಬೇಕು’ ಎಂದೂ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.