ಹೈದರಾಬಾದ್: ಹೈದರಾಬಾದ್ನ ಸಿದ್ದೀಕಿ ನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವು ವಾಲಿದ ನಂತರ, ಅದರಲ್ಲಿದ್ದ ಸುಮಾರು 30 ಜನರು ಅಪಾಯದಿಂದ ಪಾರಾಗಿದ್ದಾರೆ.

ಕಟ್ಟಡವು ಒಂದು ಬದಿ ವಾಲಿದ ಬಳಿಕ, ಅದರಲ್ಲಿದ್ದ ಜನರು ಹೊರಬಂದಿದ್ದಾರೆ. ಪ್ರಾಣ ಕಳೆದುಕೊಳ್ಳುವ ಭೀತಿಯಿಂದ ಅನೇಕರು ಕಟ್ಟಡದಿಂದ ಜಿಗಿದಿದ್ದಾರೆ. ಈ ವೇಳೆ ಸುತ್ತಮುತ್ತಲಿನ ಜನರು ತೀವ್ರ ಆತಂಕಗೊಂಡಿದ್ದರು.

ಘಟನೆ ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು, ಇತರ ಕಟ್ಟಡಗಳು ಹಾಗೂ ಸ್ಥಳೀಯರಿಗೆ ಕಟ್ಟಡದಿಂದ ಅಪಾಯವಾಗುವ ಸಾಧ್ಯತೆ ಇದ್ದ ಕಾರಣ ಅದನ್ನು ಕೆಡವಲು ನಿರ್ಧರಿಸಿದರು. ಬುಧವಾರ ಕಟ್ಟಡ ಧ್ವಂಸ ಕಾರ್ಯಾಚರಣೆ ಆರಂಭವಾಗಿದೆ.

ಇದೊಂದು ಅಕ್ರಮ ಕಟ್ಟಡ ಎಂದು ತಿಳಿದುಬಂದಿದ್ದು, ಕೇವಲ 70 ಗಜ ಅಡಿ ಜಾಗದಲ್ಲಿ ಮಾಲೀಕರು ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿದ್ದಾರೆ. ಅಲ್ಲದೇ ಕಟ್ಟಡದ ಅಡಿಪಾಯವು ದುರ್ಬಲವಾಗಿತ್ತು ಎಂದು ತಿಳಿದುಬಂದಿದೆ. ಪಕ್ಕದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ಹಾಕುತ್ತಿದ್ದ ಕಾರಣದಿಂದ ಈ ಕಟ್ಟಡವು ವಾಲಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.