ನವದೆಹಲಿ: ದೆಹಲಿ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ 70 ಶಾಸಕರ ಪೈಕಿ 37 ಶಾಸಕರ ಮೇಲೆ ಕೊಲೆ, ಅತ್ಯಾಚಾರ ಪ್ರಯತ್ನದಂಥ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ಅಭ್ಯರ್ಥಿಗಳು ನಾಮಪತ್ರದ ಜೊತೆ ಸಲ್ಲಿಸಿರುವ ದಾಖಲೆಗಳನ್ನು ವಿಶ್ಲೇಷಿಸಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಯಾರಿಸಿದ್ದು, 43 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿದ್ದು, 37 ಶಾಸಕರ ವಿರುದ್ಧ ಗಂಭೀರವಾದ ಕ್ರಿಮಿನಲ್ ಪ್ರಕರಣಗಳಿವೆ. 37 ಶಾಸಕರ ಪೈಕಿ 13 ಶಾಸಕರ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣವಿದೆ. ಎಎಪಿಯ45 ಶಾಸಕರು ಹಾಗೂ ಬಿಜೆಪಿಯಏಳು ಶಾಸಕರ ಬಳಿ ₹1 ಕೋಟಿಗಿಂತಲೂ ಅಧಿಕ ಆಸ್ತಿ ಇದೆ.

₹292 ಕೋಟಿ ಆಸ್ತಿ ಘೋಷಿಸಿಕೊಂಡಿರುವ ಎಎಪಿ ಶಾಸಕ ಧರ್ಮಪಾಲ್ ಲಕ್ರ, ಪ್ರಸ್ತುತ ವಿಧಾನಸಭೆಯ ಶ್ರೀಮಂತ ಶಾಸಕ. ಆರ್.ಕೆ.ಪುರಂ ಶಾಸಕರಾದ ಪ್ರಮೀಳಾ ತೊಕಾಸ್ ಅವರು ₹80 ಕೋಟಿ, ಪಟೇಲ್ ನಗರದ ಶಾಸಕ ರಾಜ್ ಕುಮಾರ್ ಆನಂದ್ ₹78 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಪಿ.ಸಿ. ಚಾಕೋ ರಾಜೀನಾಮೆ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡ ಹಿನ್ನೆಲೆಯಲ್ಲಿ
ದೆಹಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿ ಪಿ.ಸಿ. ಚಾಕೋ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ. ‘ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ’ ಎಂದು ಚಾಕೋ ಹೇಳಿದ್ದಾರೆ.

ಮೋದಿ ‘ಛತ್ರಪತಿ’ (ಭೋಪಾಲ್ ವರದಿ): ಪ್ರಧಾನಿ ನರೇಂದ್ರ ಮೋದಿ ‘ಛತ್ರಪತಿ’ ಎಂದು ಟ್ವೀಟ್ ಮೂಲಕ ಹೊಗಳಿರುವ ಬಿಜೆಪಿ ನಾಯಕಿ ಉಮಾ ಭಾರತಿ, ‘ಇತ್ತೀಚಿನ ವಿಧಾನಸಭೆ ಚುನಾವಣೆಯ ಫಲಿತಾಂಶವು ಪ್ರಧಾನಿ ಅವರನ್ನು ರಾಷ್ಟ್ರದಲ್ಲಿ ‘ಸರಿಸಾಟಿ ಇಲ್ಲದ ನಾಯಕ’ ಎಂದು ದೃಢಪಡಿಸಿದೆ’ ಎಂದಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಜಯಭೇರಿಗಳಿಸಿದ ದಿನವೇ ಉಮಾ ಭಾರತಿ ಈ ಟ್ವೀಟ್ ಮಾಡಿರುವುದು ಗೊಂದಲವನ್ನೂ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.