ಗಾಜಿಯಾಬಾದ್ (ಉತ್ತರ ಪ್ರದೇಶ): 1000 ಕೆ.ಜಿ ಗುಜರಿ ಲೂಟಿ ಮಾಡಿದ ಪ್ರಕರಣದಲ್ಲಿ ಇಲ್ಲಿನ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

ಟ್ರಾನ್ಸ್–ಹಿಂಡನ್ ಪ್ರದೇಶದಲ್ಲಿರುವ ಗೋದಾಮಿನಿಂದ ಗುಜರಿ ಕಳ್ಳತನವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 17 ರಂದು ರಾಜ್ನಗರ ಪ್ರದೇಶದಲ್ಲಿರುವ ಗುಜರಿ ಗೋದಾಮಿನಿಂದ ಇವರು ಕಳ್ಳತನ ಮಾಡಿದ್ದರು. ಭಾನುವಾರ ರಾತ್ರಿ ಅವರನ್ನು ಬಂಧಿಸಲಾಗಿದೆ ಎಂದು ಗಾಜಿಯಾಬಾದ್ ಪೊಲೀಸ್ ಉಪಕಮೀಷನರ್ ನಿಪುನ್ ಅಗರ್ವಾಲ್ ತಿಳಿಸಿದ್ದಾರೆ.

ಮನೀಶ್, ವಿವೇಕ್, ಚಂದನ್, ಸಚಿನ್, ಸಂಜಯ್, ಬಾಬು ಸಿಂಗ್, ನುಬರ್ ಖಾನ್ ಹಾಗೂ ಉಮರ್ ಎಂಬವರೇ ಬಂಧಿತರು.

ಗೋದಾಮು ಕಾವಲುಗಾರರನ್ನು ಬಂದೂಕು ತೋರಿಸಿ ಹೆದರಿಸಿ ಈ ಲೂಟಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

₹ 2.5 ಲಕ್ಷ ಮೌಲ್ಯದ ಗುಜರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಒಂದು ನಾಡ ಬಂದೂಕು, ಮದ್ದುಗುಂಡುಗಳು ಹಾಗೂ ಗುಜರಿ ತುಂಬಿದ್ದ 3 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಘಟನೆಯಲ್ಲಿ ಭಾಗಿಯಾಗಿರುವ ಮೂವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಜಾರಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.