ಅಯೋಧ್ಯೆ: ಬಿಹಾರದಿಂದ ಉತ್ತರಪ್ರದೇಶಕ್ಕೆ ಅಕ್ರಮವಾಗಿ ಕರೆದೊಯ್ಯುತ್ತಿದ್ದ 95 ಮಕ್ಕಳನ್ನು ಉತ್ತರ ಪ್ರದೇಶದ ಮಕ್ಕಳ ಆಯೋಗವು ರಕ್ಷಣೆ ಮಾಡಿದೆ. ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರು ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರು ನೀಡಿದ ಮಾಹಿತಿ ಆಧರಿಸಿ ಮಕ್ಕಳನ್ನು ರಕ್ಷಣೆ ಮಾಡಲಾಯಿತು ಎಂದು ಅಯೋಧ್ಯೆಯ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸರ್ವೇಶ್ ಅವಸ್ತಿ ತಿಳಿಸಿದ್ದಾರೆ.

‘ಸುಚಿತ್ರಾ ಚತುರ್ವೇದಿ ಅವರು ನನಗೆ ಕರೆ ಮಾಡಿದ್ದರು. ಬಿಹಾರದಿಂದ ಅಪ್ರಾಪ್ತ ಮಕ್ಕಳನ್ನು ಅಕ್ರಮವಾಗಿ ಸಹರಾನ್‌ಪುರಕ್ಕೆ ಸಾಗಿಸಲಾಗುತ್ತಿದ್ದು, ಸದ್ಯ ಅವರನ್ನು ಗೋರಖ್‌ಪುರದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಕೂಡಲೇ ನಾವು ಕಾರ್ಯಪ್ರವೃತ್ತರಾಗಿ ಅಯೋಧ್ಯೆಯಲ್ಲಿ ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ. ಜತೆಗೆ ಮಕ್ಕಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ’ ಎಂದು ಅವಸ್ತಿ ವಿವರಿಸಿದ್ದಾರೆ.

‘ಪೋಷಕರಿಂದ ಒಪ್ಪಿಗೆ ಪತ್ರ ಪಡೆಯದೆ ಮಕ್ಕಳನ್ನು ಕರೆತರಲಾಗಿದೆ. ರಕ್ಷಿಸಲ್ಪಟ್ಟ ಮಕ್ಕಳು 4-12 ವರ್ಷದೊಳಗಿನವರಾಗಿದ್ದಾರೆ. ಮಕ್ಕಳನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆಂದು ತಿಳಿದಿಲ್ಲ. ಪೋಷಕರನ್ನು ಸಂಪರ್ಕಿಸಿ ಅವರನ್ನು ಒಪ್ಪಿಸಲಾಗುವುದು’ ಎಂದು ಸಿಡಬ್ಲ್ಯೂಸಿ ಸದಸ್ಯರು ತಿಳಿಸಿದ್ದಾರೆ.

ಈ ಹಿಂದೆ ಬಿಹಾರದಿಂದ ಇತರೆ ರಾಜ್ಯಗಳ ಮದರಸಾಗಳಿಗೆ ಕಳುಹಿಸಲಾಗುತ್ತಿದ್ದ ಮಕ್ಕಳನ್ನು ಗೋರಖ್‌ಪುರದಲ್ಲಿ ಉತ್ತರಪ್ರದೇಶದ ಮಕ್ಕಳ ಆಯೋಗವು ರಕ್ಷಣೆ ಮಾಡಿತ್ತು.
.ಮಕ್ಕಳ ಕಳ್ಳಸಾಗಣೆ: ಉತ್ತರಪ್ರದೇಶ, ಬಿಹಾರ, ಆಂಧ್ರ ಮುಂಚೂಣಿ.ಆಳ-ಅಗಲ | ಮಕ್ಕಳ ನಾಪತ್ತೆ ಮತ್ತು ಅಪಹರಣ: ಕಳವಳ ಮೂಡಿಸಿದ ಏರಿಕೆ ಪ್ರಮಾಣ.ಮಕ್ಕಳ ಮಾರಾಟ: ಗಾರ್ಮೆಂಟ್ಸ್ ನೌಕರಳೀಗ ಸಿರಿವಂತೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.