ಮುಂಬೈ: ‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಲ್ಲಿ ತೆಲುಗು ದೇಶಂ ಪಾರ್ಟಿ (TDP) ಹಾಗೂ ಸಂಯುಕ್ತ ಜನತಾ ದಳ (JDU) ಪಾತ್ರ ಮಹತ್ವದ್ದು. ಹೀಗಾಗಿ ಲೋಕಸಭಾ ಸ್ಪೀಕರ್ ಹುದ್ದೆಗೆ ಈ ಪಕ್ಷಗಳು ಬೇಡಿಕೆ ಇಡಬೇಕು’ ಎಂದು ಶಿವಸೇನೆಯ (ಯುಬಿಟಿ) ಮುಖಂಡ ಆದಿತ್ಯ ಠಾಕ್ರೆ ಶುಕ್ರವಾರ ಹೇಳಿದ್ದಾರೆ.

ಮೈಕ್ರೊ ಬ್ಲಾಗಿಂಗ್ ಎಕ್ಸ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ‘ಬಿಜೆಪಿ ಒಮ್ಮೆ ಸರ್ಕಾರ ರಚಿಸಿದ ನಂತರ, ಒಕ್ಕೂಟದಲ್ಲಿರುವ ಪಕ್ಷಗಳನ್ನು ಒಡೆಯಲು ಯತ್ನಿಸುತ್ತದೆ. ಹೀಗಾಗಿ, ಒಕ್ಕೂಟದಲ್ಲಿರುವ ಪಕ್ಷಗಳು ಸಾಧ್ಯವಾದಷ್ಟು ಸ್ಪೀಕರ್ ಹುದ್ದೆಗೇ ಬೇಡಿಕೆ ಇಡಿ’ ಎಂದು ಸಲಹೆ ನೀಡಿದ್ದಾರೆ.
.ಸರ್ಕಾರದ ಎಲ್ಲಾ ನಿರ್ಧಾರಗಳಲ್ಲೂ ಸರ್ವಾನುಮತ ನಮ್ಮ ಗುರಿ: ಎನ್‌ಡಿಎ ಸಭೆಯಲ್ಲಿ ಮೋದಿ.ಬೆಂ. ಗ್ರಾಮಾಂತರದ ಫಲಿತಾಂಶ ನನ್ನ ವೈಯಕ್ತಿಕ ಸೋಲು: ಡಿ.ಕೆ. ಶಿವಕುಮಾರ್.
‘ಶಿವಸೇನೆ ಹಾಗೂ ಎನ್‌ಸಿಪಿಗಳನ್ನು ಒಡೆಯಲು ಬಿಜೆಪಿ ಇದೇ ರೀತಿಯ ತಂತ್ರಗಾರಿಕೆಯನ್ನು ಬಳಸಿತ್ತು. ಬಿಜೆಪಿಯ ಇಂಥ ತಂತ್ರಗಳ ಅನುಭವನನ್ನು ಹಂಚಿಕೊಳ್ಳುತ್ತಿದ್ದೇವೆ. ಸರ್ಕಾರ ಸ್ಥಾಪಿಸಿದ ಮರುಕ್ಷಣವೇ ಅವರು ತಮ್ಮ ವಾಗ್ದಾನ ಮರೆಯುತ್ತಾರೆ. ಪಕ್ಷಗಳನ್ನು ವಿಭಜಿಸುತ್ತಾರೆ. ಇವೆಲ್ಲವೂ ಈ ಹಿಂದೆಯೂ ನಿಮ್ಮ ಅನುಭವಕ್ಕೂ ಬಂದಿರಬಹುದು’ ಎಂದು ಹೇಳಿರುವ ಠಾಕ್ರೆ, ಟಿಡಿಪಿ ಮತ್ತು ಜೆಡಿಯುವನ್ನೂ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಸರ್ಕಾರ ರಚಿಸಲು ಬಿಜೆಪಿಗೆ ಬಹುಮತದ ಕೊರತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಟಿಡಿಪಿ ಹಾಗೂ ಜೆಡಿಯು ಬೆಂಬಲ ಪಡೆದಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಲು ಈ ಎರಡೂ ಪಕ್ಷಗಳು ನೆರವಾಗಿವೆ.

ಎನ್‌ಡಿಎ ಹೊಂದಿರುವ ಒಟ್ಟು ಸಂಖ್ಯಾಬಲ 293. ಇದರಲ್ಲಿ ಬಿಜೆಪಿ 240 ಸ್ಥಾನಗಳನ್ನು ಪಡೆದರೆ, ಟಿಡಿಪಿ 16 ಹಾಗೂ ಜೆಡಿಯು 12 ಸ್ಥಾನಗಳೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.