ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ದೂರು ಹಿಂಪಡೆಯಲು ನಿರಾಕರಿಸಿದ ಅತ್ಯಾಚಾರ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ ನಡೆದಿದೆ.

30ರ ಹರೆಯದ ಸಂತ್ರಸ್ತೆ ನಾಲ್ಕು ಮಂದಿವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಅತ್ಯಾಚಾರ ಆರೋಪಿಗಳು ಬುಧವಾರ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು ಶೇ. 30ರಷ್ಟುಸುಟ್ಟಗಾಯಗಳಾಗಿವೆ. ಸಂತ್ರಸ್ತೆ ಮೀರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಅತ್ಯಾಚಾರ ಆದ ನಂತರ ಬನ್ನಿ ಎಂದ ಉತ್ತರ ಪ್ರದೇಶದ ಪೊಲೀಸ್: ಮಹಿಳೆಯ ಆರೋಪ

ಆ್ಯಸಿಡ್ ದಾಳಿ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬುಧವಾರ ರಾತ್ರಿ ನಾಲ್ವರು ಗಂಡಸರು ಮಹಿಳೆಯನ್ನು ಮನೆಯಿಂದ ಹೊರಗೆಳೆದು ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾರೆ. ಈ ಆರೋಪಿಗಳ ವಿರುದ್ಧ ಮಹಿಳೆ ಸ್ಥಳೀಯ ನ್ಯಾಯಾಲಯದಲ್ಲಿ ಅತ್ಯಾಚಾರ ಆರೋಪ ಹೊರಿಸಿದ್ದರು. ಆ ದೂರು ಹಿಂಪಡೆಯಬೇಕು ಎಂದು ಆರೋಪಿಗಳು ಒತ್ತಾಯಿಸಿದ್ದು, ಅದಕ್ಕೆ ಮಹಿಳೆ ನಿರಾಕರಿಸಿದ್ದರು. ಆ್ಯಸಿಡ್ ದಾಳಿ ನಡೆಸಿದ ದುಷ್ಕರ್ಮಿಗಳು ತಲೆ ಮರೆಸಿಕೊಂಡಿದ್ದು ಅವರನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:ಮದುವೆ ಮನೆಯಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯ ನಿಲ್ಲಿಸಿದ್ದಕ್ಕೆ ಗುಂಡು

ತನಿಖೆ ನಡೆಸಿದಾಗ ಅತ್ಯಾಚಾರವೆಸಗಿದ ಬಗ್ಗೆ ಯಾವುದೇ ಸಾಕ್ಷ್ಯ ಪೊಲೀಸರಿಗೆ ದೊರೆತಿಲ್ಲ. ಹಾಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸಲು ಪೊಲೀಸರು ತೀರ್ಮಾನಿಸಿದ್ದರು. ಹೀಗಿರುವಾಗ ಮಹಿಳೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.