ಮುಂಬೈ:ಲಿಂಗಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮುಂಬೈನ ಕಾನ್ಸ್ಟೆಬಲ್ ಲಲಿತಾಕುಮಾರ್ ಮಂಗಳವಾರ ಕರ್ತವ್ಯಕ್ಕೆ ಹಾಜರಾದರು.

ಭಾರತೀಯ ಪೊಲೀಸ್ ಇತಿಹಾಸದ ಲ್ಲಿಯೇ ಸಿಬ್ಬಂದಿಯೊಬ್ಬರು ಲಿಂಗಪರಿವರ್ತನೆಗೊಳಗಾದ ಮೊದಲ ಪ್ರಕರಣವಿದು.

ಪುರುಷ ಸಿಬ್ಬಂದಿಯಂತೆ ಖಾಕಿ ಪ್ಯಾಂಟು, ಅದಕ್ಕೆ ಒಪ್ಪುವ ಅರ್ಧತೋಳಿನ ಶರ್ಟು, ತಲೆಗೊಂದು ಟೋಪಿ ಧರಿಸಿದ್ದರು.

29 ವರ್ಷದ ಲಲಿತ್ಕುಮಾರ್ ಸಾಳ್ವೆ, ಭೀಡ್ ಜಿಲ್ಲೆಯ ಮಜಲಗಾಂವ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಗೆ ಮೇ 22ರಂದು ದಾಖಲಾಗಿದ್ದ ಸಾಳ್ವೆ, ಶಸ್ತ್ರಚಿಕಿತ್ಸೆಯ ನಂತರ ಜೂನ್ 12ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ನಾಲ್ಕು ವರ್ಷಗಳಿಂದೀಚೆಗೆ ತಮ್ಮ ದೇಹದಲ್ಲಾದ ಬದಲಾವಣೆ ಯನ್ನು ಗಮನಿಸಿದ ಸಾಳ್ವೆ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ತಮ್ಮ ದೇಹದಲ್ಲಿ ಪುರುಷ ವಂಶವಾಹಿ ಗಳಿರುವುದನ್ನು ವೈದ್ಯರಿಂದ ತಿಳಿದು ಕೊಂಡಿದ್ದರು.

2016ರಲ್ಲಿ ಮುಂಬೈನ ಜೆ.ಜೆ. ಆಸ್ಪತ್ರೆ ವೈದ್ಯರು, ಸಾಳ್ವೆ ಅವರಿಗೆ ಲಿಂಗ ಪರಿವರ್ತನೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಇದಕ್ಕಾಗಿ ರಜೆ ಕೋರಿ, ಸಾಳ್ವೆ ಬಾಂಬೆ ಹೈಕೋರ್ಟ್ ಮೆಟ್ಟಿ ಲೇರಿದ್ದರು. ‘ನಾಲ್ಕು ವರ್ಷಗಳಿಂದ ಈಚೆಗೆ ನನ್ನಲ್ಲಿ ಪುರುಷನ ಲಕ್ಷಣಗಳು ಕಾಣಿಸಿಕೊಂಡವು. ಮಹಿಳಾ ಕಾನ್ಸ್ಟೆಬಲ್ ಕಡೆಗೆ ಹೆಚ್ಚು ಆಕರ್ಷಿತಳಾ ಗುತ್ತಿದ್ದೆ. ಒಂದು ವೇಳೆ ಸರ್ಕಾರ ಅಥವಾ ಇಲಾಖೆಯು ನನ್ನ ಲಿಂಗಪರಿವರ್ತನೆಗೆ ಅವಕಾಶ ನೀಡದಿದ್ದರೆ, ನಾನು ಗಂಭೀರ ಮಾನಸಿಕ ತಳಮಳಕ್ಕೆ ತುತ್ತಾಗ ಬೇಕಾಗುತ್ತದೆ. ಅಲ್ಲದೆ, ಸಾಮಾಜಿಕ ಕಳಂಕ ಹೊತ್ತುಕೊಳ್ಳಬೇಕಾಗು ತ್ತದೆ’ ಎಂದು ಸಾಳ್ವೆ ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದರು.

ನ್ಯಾಯಾಲಯವು ಮಹಾರಾಷ್ಟ್ರ ಮೇಲ್ಮನವಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ನ್ಯಾಯಮಂಡಳಿಯು ಸಾಳ್ವೆ ಅವರಿಗೆ ರಜೆ ಮಂಜೂರು ಮಾಡಿತ್ತು.

‘ಇದು ಶಸ್ತ್ರಚಿಕಿತ್ಸೆಯ ಮೊದಲ ಹಂತ. ಎರಡನೇ ಹಂತದ ಶಸ್ತ್ರಚಿಕಿತ್ಸೆಯನ್ನು ಆರು ತಿಂಗಳ ನಂತರ ನಡೆಸಬೇಕಿದೆ’ ಎಂದು ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಮಧುಕರ್ ಗಾಯಕವಾಡ್ ಹಾಗೂ ಡಾ. ರಜತ್ ಕಪೂರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.