ಕೊಚ್ಚಿ: ಶಾರ್ಜಾದಿಂದ 222 ಪ್ರಯಾಣಿಕರನ್ನು ಕರೆದುಕೊಂಡು ಬಂದ ‘ಏರ್ ಅರೇಬಿಯಾ’ ವಿಮಾನದಲ್ಲಿ ತಾಂತ್ರಿಕ ದೋಷ (ಹೈಡ್ರಾಲಿಕ್ ವೈಫಲ್ಯ) ಕಾಣಿಸಿಕೊಂಡ ಪರಿಣಾಮ ಕೇರಳದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಕೆಲ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.

ವಿಮಾನವು ಲ್ಯಾಂಡ್ ಆಗಿದ್ದು ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ‘ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಸಿಐಎಎಲ್) ತಿಳಿಸಿದೆ.

ವಿಕ್ರಮ್ ಭಟ್ರಿಂದ ಲಲಿತ್ ಮೋದಿವರೆಗೆ... ಸುಶ್ಮಿತಾರ 10 ಪ್ರೇಮ ಸಂಬಂಧಗಳು

ಏರ್ ಅರೇಬಿಯಾ ‘ಜಿ9–426’ ವಿಮಾನವು ಸಂಜೆ 7.13ಕ್ಕೆ ಲ್ಯಾಂಡ್ ಆಗಬೇಕಿತ್ತು. ವಿಮಾನವು ತಾಂತ್ರಿಕ ದೋಷ (ಹೈಡ್ರಾಲಿಕ್ ಫೈಲ್ಯೂರ್) ಎದುರಿಸುತ್ತಿದೆ ಎಂದು ತಿಳಿದ ಕೂಡಲೇ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ವಿಮಾನವು 9ನೇ ರನ್‌ವೇಯಲ್ಲಿ 7.29ಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಬಳಿಕ ತುರ್ತು ಪರಿಸ್ಥಿತಿ ಹಿಂಪಡೆಯಲಾಯಿತು ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಸಿಐಎಎಲ್ ಮಾಹಿತಿ ನೀಡಿದೆ.

‘ಏರ್ ಅರೇಬಿಯಾ’ ವಿಮಾನಯಾನ ಸಂಸ್ಥೆ ಈವರೆಗೆ ಹೇಳಿಕೆ ಬಿಡುಗಡೆ ಮಾಡಿಲ್ಲ.

ಪ್ರವಾಹ ಮಧ್ಯೆ ಅಣೆಕಟ್ಟು ಗೇಟ್ ತೆರೆಯುವ ಯತ್ನ: ವಿಡಿಯೋ ವೈರಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.