ನವದೆಹಲಿ: ಏರ್ ಇಂಡಿಯಾದಲ್ಲಿ ಹುದ್ದೆಗಳು ಖಾಲಿ ಇವೆ ಎಂಬ ನಕಲಿ ಜಾಹೀರಾತು ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲು ಏರ್ ಇಂಡಿಯಾ ತೀರ್ಮಾನಿಸಿದೆ.

‘120 ಹುದ್ದೆಗಳು ಖಾಲಿ ಇದ್ದು, ಯಾವುದೇ ಹುದ್ದೆಗೆ ನೇಮಕಾತಿ ಅರ್ಜಿ ಸಲ್ಲಿಸಲು ₹9,800 ಮತ್ತು ಜಿಎಸ್ಟಿ ಪಾವತಿಸಬೇಕು’ ಎಂಬ ನಕಲಿ ಜಾಹೀರಾತು ಪ್ರಕಟವಾಗಿರುವುದು ಬುಧವಾರ ಸಂಸ್ಥೆಯ ಗಮನಕ್ಕೆ ಬಂದಿದೆ.

ವ್ಯಕ್ತಿಯೊಬ್ಬರು ಈ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಏರ್ಇಂಡಿಯಾದಲ್ಲಿ ಈ ಹುದ್ದೆಗಳ ನೇಮಕಾತಿಯಾಗುತ್ತಿದೆಯೇ ಎಂದು ಪ್ರಶ್ನಿಸಿದ್ದರು. ಎರಡು ಪುಟದ ಜಾಹೀರಾತಿನಲ್ಲಿ ಅರ್ಜಿದಾರರು,ರೋಹನ್ ವರ್ಮಾ ಎನ್ನುವವರನ್ನು ಸಂಪರ್ಕಿಸಿದಾಗ ₹9,800 ಭದ್ರತಾ ಠೇವಣಿ ಇಡಲು ಸೂಚಿಸಲಾಗಿತ್ತು.ಹಣವನ್ನು ಮರುಪಾವತಿಸುವುದಾಗಿ ತಿಳಿಸಲಾಗಿತ್ತು.

ಜಾಹೀರಾತಿನಲ್ಲಿ ಮುಂಬೈಯ ನಕಲಿ ವಿಳಾಸ ನೀಡಲಾಗಿದೆ. ‘ಈ ಜಾಹೀರಾತು ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಶೀಘ್ರ ದೂರು ದಾಖಲಿಸಲಾಗುವುದು’ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.