ನವದೆಹಲಿ: ಸಿಡ್ನಿ ವಿಮಾನ ನಿಲ್ದಾಣದಲ್ಲಿ ಮಳಿಗೆಯೊಂದರಿಂದ ಪರ್ಸ್ ಕದ್ದಏರ್ ಇಂಡಿಯಾ(ಏಐ)ಪೂರ್ವ ವಲಯದ ಪ್ರಾದೇಶಿಕ ನಿರ್ದೇಶಕ ರೋಹಿತ್ ಭಾಸಿನ್,ಕಡ್ಡಾಯವಾಗಿ ರಾಜೀನಾಮೆ ನೀಡಬೇಕು ಎಂದುಏರ್ ಇಂಡಿಯಾ ಸೂಚಿಸಿದೆ.

ಜೂನ್ 22ರಂದುಸಿಡ್ನಿ ವಿಮಾನ ನಿಲ್ದಾಣದಲ್ಲಿ ರೋಹಿತ್ ಪರ್ಸ್ ಕದ್ದಿರುವುದು ತನಿಖೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಸಂಸ್ಥೆ ಈ ಸೂಚನೆ ನೀಡಿದೆ. ಸ್ವಯಂ ನಿವೃತ್ತಿ (ವಿಆರ್ಎಸ್) ಪಡೆಯುವ ರೋಹಿತ್ ಮನವಿಯನ್ನು ಸಂಸ್ಥೆ ತಿರಸ್ಕರಿಸಿದೆ. ‘ರೋಹಿತ್ ವಿರುದ್ಧ ಮತ್ತಷ್ಟು ದೂರುಗಳಿದ್ದು, 2016 ಏಪ್ರಿಲ್ನಲ್ಲಿ ದೆಹಲಿ–ಪ್ಯಾರಿಸ್ ನಡುವಿನ ಏಐ ಬಿ787 ಡ್ರೀಮ್ಲೈನರ್ವಿಮಾನವನ್ನು ನಿಗದಿತ ಎತ್ತರಕ್ಕಿಂತ ಅಧಿಕ ಎತ್ತರದಲ್ಲಿ ಹಾರಿಸಿದ್ದರು. ಈ ಮೂಲಕ ಪ್ರಯಾಣಿಕರ ಜೀವದ ಜತೆ ಚೆಲ್ಲಾಟವಾಡಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಏರ್ ಇಂಡಿಯಾದಲ್ಲಿ ಆಗಸ್ಟ್ 31ರವರೆಗೆ ರೋಹಿತ್ ಕಾರ್ಯನಿರ್ವಹಿಸಲಿದ್ದಾರೆ.ಸಿಡ್ನಿ ಘಟನೆ ಬಳಿಕ ಅಮಾನತುಗೊಂಡಿದ್ದ ರೋಹಿತ್ ಅವರಿಗೆ ಏರ್ ಇಂಡಿಯಾ ಸಂಸ್ಥೆ ಮತ್ತು ವಿಮಾನದೊಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.