ಹೈದರಾಬಾದ್: ಫಾರ್ಮುಲಾ ಇ ರೇಸ್ನಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪದಡಿ ತೆಲಂಗಾಣ ಶಾಸಕ, ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ರಾಜ್ಯಪಾಲ ಜಿಷ್ಣು ದೇವ್ ಶರ್ಮ ವಿಳಂಬ ಮಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಕೆ.ಟಿ ರಾಮರಾವ್ ಅವರು ಪೌರಾಡಳಿತ ಸಚಿವರಾಗಿದ್ದಾಗ, ಸೂಕ್ತ ನಿಯಮಗಳನ್ನು ಪಾಲಿಸದೇ ರೇಸ್ ಆಯೋಜಕರಿಗೆ ₹55 ಕೋಟಿ ವರ್ಗಾಯಿಸಲು ಅನುಮತಿ ನೀಡಿದ್ದಾರೆ ಎಂದು ಆರೋಪಿಸಿರುವ ಎಸಿಬಿ ತನಿಖೆಗೆ ಅನುಮತಿ ಕೋರಿದೆ.

‘ಬಿಜೆಪಿ ಮತ್ತು ಬಿಆರ್ಎಸ್ ನಡುವಿನ ಒಪ್ಪಂದ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲು ವಿಳಂಬ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಫಾರ್ಮುಲಾ ಇ ರೇಸ್ ಪ್ರಕರಣಕ್ಕೆ ಸಂಬಂಧಿಸಿ ಏನು ಬೇಕಾದರೂ ಮಾಡಿ. ಬೇಕಾದರೆ ದೂರು ನೀಡಿ ಎಂದು ಹಲವು ಬಾರಿ ಹೇಳಿದ್ದೇನೆ. ನಾನು ದೆಹಲಿಗೆ ಹೋಗುವುದು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಎಂದಾದರೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವುದು ಒಪ್ಪಂದಕ್ಕಾಗಿಯೇ’ ಎಂದು ಕೆಟಿಆರ್ ಪ್ರಶ್ನಿಸಿದರು.

‘ಪೊಂಗುಲೇಟಿ ಶ್ರೀನಿವಾಸ್ ಅವರು ಇ.ಡಿ. ತನಿಖೆಯಿಂದ ತಪ್ಪಿಸಿಕೊಳ್ಳಲು ಅದಾನಿಯವರ ಕಾಲು ಹಿಡಿದಿರಲಿಲ್ಲವೇ? ಅನುಮೂಲ ಪರಿವಾರದ ಹಗರಣವನ್ನು ಬಯಲಿಗೆಳೆಯಲು ನಾನು ದೆಹಲಿಗೆ ಹೋಗಿದ್ದೆ. ಇನ್ನು ಮುಂದೆಯೂ ಆ ಹಗರಣವನ್ನು ಬಹಿರಂಗಪಡಿಸುತ್ತೇನೆ’ ಎಂದು ಹೇಳಿದ್ದಾರೆ.

ಹೈದರಾಬಾದ್ ಇಪ್ರಿಕ್ಸ್ ಫಾರ್ಮುಲಾ ಇ ಹೆಸರಿನಲ್ಲಿ ನಾಲ್ಕು ರೇಸ್ಗಳನ್ನು ನಡೆಸುವ ಕುರಿತು ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ಪೌರಾಡಳಿತ ಇಲಾಖೆಯು ಫಾರ್ಮುಲಾ ಇ ಆಯೋಜಕರು ಮತ್ತು ಅಸೆ ಎನ್ಎಕ್ಸ್ಟಿ ಜೆನ್ ಪ್ರೈ.ಲಿ ಜೊತೆ 2022ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ಮೊದಲ ಆವೃತ್ತಿಯಲ್ಲಿ ನಷ್ಟ ಉಂಟಾದ ಕಾರಣ ಏಸ್ ಎನ್ಎಕ್ಸ್ಟಿ ಜೆನ್ ಪ್ರೈ.ಲಿ ನಂತರದ ಆವೃತ್ತಿಗಳಿಂದ ಹಿಂದೆ ಸರಿದಿತ್ತು. ಆದರೆ ಫಾರ್ಮುಲಾ ಇ ಆಯೋಜಕರು ಮುಂದಿನ ಆವೃತ್ತಿಯನ್ನು ನಡೆಸಲು ಉತ್ಸುಕರಾಗಿದ್ದುದರಿಂದ ಸಚಿವರಾಗಿದ್ದ ಕೆಟಿಆರ್ ಅವರ ಸೂಚನೆ ಮೇರೆಗೆ ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರು ₹9 ಕೋಟಿ ತೆರಿಗೆ ಸೇರಿ ಒಟ್ಟು ₹55 ಕೋಟಿ ಹಣವನ್ನು ರೇಸ್ ಆಯೋಜಕರಿಗೆ ವರ್ಗಾಯಿಸಿದ್ದರು.

ತೆಲಂಗಾಣ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದರೂ ಚುನಾವಣಾ ಅಯೋಗದ ಅನುಮತಿ ಪಡೆಯದೇ ಮತ್ತು ಪೌಂಡ್ ರೂಪದಲ್ಲಿ ವರ್ಗಾಯಿಸಲು ಆರ್ಬಿಐ ಅನುಮತಿಯಿಲ್ಲದೇ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸುವ ಮೂಲಕ ಅವ್ಯವಹಾರ ನಡೆಸಲಾಗಿದೆ ಎಸಿಬಿ ಆರೋಪ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.