ಲಖನೌ: ಅಕ್ರಮ ಶಸ್ತ್ರಾಸ್ತ್ರ ಖರೀದಿ ಪ್ರಕರಣದಲ್ಲಿ ಜೈಲು ಸೇರಿರುವ ರಾಜಕಾರಣಿ ಮುಕ್ತಾರ್ ಅನ್ಸಾರಿ ಅವರ ಪುತ್ರ ಶಾಸಕ ಅಬ್ಬಾಸ್ ಅನ್ಸಾರಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ಸೋಮವಾರ ತಿರಸ್ಕರಿಸಿದೆ.

ನಿರೀಕ್ಷಾ ಜಾಮೀನು ಅರ್ಜಿ ತಿರಸ್ಕರಿಸಿರುವ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಪೀಠ, ಆರೋಪಿ ವಿರುದ್ಧದ ಆರೋಪ ಗಂಭೀರ ಸ್ವರೂಪವಾಗಿದ್ದು ಮತ್ತು ಆತ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಲಾಗಿದೆ ಎಂದು ಹೇಳಿದೆ.

ಸಂಬಂಧಪಟ್ಟ ನ್ಯಾಯಾಲಯದ ಎದುರು ಶರಣಾವಾಗುವಂತೆ ಅಬ್ಬಾಸ್ ಅನ್ಸಾರಿಗೆ ಸೂಚಿಸಿರುವ ಕೋರ್ಟ್, ಅವರ ಮನವಿಯನ್ನು ತ್ವರಿತವಾಗಿ ತೀರ್ಮಾನಿಸಲಿದೆ ಎಂದು ತಿಳಿಸಿದೆ.

ಅಬ್ಬಾಸ್ ಬಂಧನಕ್ಕೆ ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ದೆಹಲಿ, ಲಖನೌ, ಮಿರ್ಜಾಪುರ, ಗಾಜಿಪುರ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ.

ಪುರಿ ಜಗನ್ನಾಥನ ರತ್ನ ಭಂಡಾರ ಈಗ ಇನ್ನಷ್ಟು ನಿಗೂಢ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.