ನವದೆಹಲಿ: ಮಂಗಳವಾರ ಪ್ಯಾರಿಸ್ನಲ್ಲಿ ರಫೇಲ್ ಯುದ್ಧ ಯುದ್ಧ ವಿಮಾನ ಹಸ್ತಾಂತರದ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಮಾನಕ್ಕೆ ‘ಶಸ್ತ್ರ ಪೂಜೆ’ ಸಲ್ಲಿಸಿದ್ದರು. ಶಸ್ತ್ರ ಪೂಜೆ ಬಗ್ಗೆ ಕಾಂಗ್ರೆಸ್ ಟೀಕಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಪಕ್ಷವು ಟೀಕೆ ಮಾಡುವ ಮುನ್ನ ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಿನ್ನೆ ಫ್ರಾನ್ಸ್ನಲ್ಲಿ ರಾಜನಾಥ್ ಸಿಂಗ್ ರಫೇಲ್ ಯುದ್ಧ ವಿಮಾನಕ್ಕೆ ಶಸ್ತ್ರಪೂಜೆ ಮಾಡಿದ್ದರು. ಕಾಂಗ್ರೆಸ್ಗೆ ಅದು ಇಷ್ಟವಾಗಲಿಲ್ಲ. ವಿಜಯದಶಮಿಯಂದು ಶಸ್ತ್ರ ಪೂಜೆ ಮಾಡುವುದಿಲ್ಲವೇ? ಯಾವ ವಿಷಯವನ್ನು ಟೀಕಿಸಬೇಕು ಎಂಬುದರ ಬಗ್ಗೆ ಅವರು ಯೋಚಿಸುವುದೊಳಿತು ಎಂದು ಹರ್ಯಾಣದ ಕೈತಾಲ್ನಲ್ಲಿ ನಡೆದ ರ್ಯಾಲಿಯಲ್ಲಿಶಾ ಹೇಳಿದ್ದಾರೆ. ಹರ್ಯಾಣದಲ್ಲಿ ಅಕ್ಟೋಬರ್ 21ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

ಕಾಂಗ್ರೆಸ್ಗೆ ಭಾರತೀಯ ಆಚಾರ ಮತ್ತು ಸಂಪ್ರದಾಯದ ಬಗ್ಗೆ ವಿರೋಧವಿದೆ. ವಾಯುಪಡೆ ಆಧುನೀಕರಣಗೊಳ್ಳುವುದರ ಬಗ್ಗೆಯೂ ಅವರಿಗೆ ಅಸಮಾಧಾನ ಇದೆ ಎಂದು ಬಿಜೆಪಿ ಆರೋಪಿಸಿದೆ.

ಕ್ವಟ್ರೋಚಿ ಅವರನ್ನು ಆರಾಧಿಸುವ ಪಕ್ಷಕ್ಕೆ ಶಸ್ತ್ರಪೂಜೆ ಸಹಜವಾಗಿಯೇ ಸಮಸ್ಯೆ ಆಗಿರುತ್ತದೆ ಎಂದು ಬಿಜೆಪಿ ಟ್ವೀಟಿಸಿದೆ.

ಕಾಂಗ್ರೆಸ್ನ ಬೋಫೋರ್ಸ್ ಹಗರಣದ ಬಗ್ಗೆ ಟೀಕಿಸಿದ ಬಿಜೆಪಿ, ಬೋಫೋರ್ಸ್ ಹಗರಣವನ್ನು ಮತ್ತೆ ನೆನಪಿಸಿದ್ದಕ್ಕಾಗಿ ಬಿಜೆಪಿಗೆ ಧನ್ಯವಾದಗಳು ಎಂದಿದೆ.

ಇದನ್ನೂ ಓದಿ:ರಫೇಲ್ಗೆ ’ಶಸ್ತ್ರ ಪೂಜೆ’ಯ ‘ನಾಟಕ’ದ ಅಗತ್ಯವಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.