ಕೊಯಮತ್ತೂರು (ತಮಿಳುನಾಡು): ಜಿಲ್ಲೆಯ ಕರಮದೈ ನಗರದ ಚೆನ್ನಿವೀರಂ ಪಾಳ್ಯಂ ಗ್ರಾಮದಲ್ಲಿ ಸೋಮವಾರ ರಾತ್ರಿ ಸ್ಥಗಿತಗೊಂಡ ಚಿಪ್ಸ್ ರಫ್ತು ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.

‘ಅನಿಲ ಸೋರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಅಧಿಕಾರಿಗಳು 250ಕ್ಕೂ ಹೆಚ್ಚು ಕುಟುಂಬಗಳನ್ನು ಗ್ರಾಮದಿಂದ ಕಲ್ಯಾಣ ಮಂಟಪವೊಂದಕ್ಕೆ ಸ್ಥಳಾಂತರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಳೆದ ನಾಲ್ಕು ವರ್ಷಗಳ ಹಿಂದೆಯೇ ಈ ಚಿಪ್ಸ್ ರಫ್ತು ಘಟಕ ಸ್ಥಗಿತಗೊಂಡಿದೆ. ಇದರ ಶೈತ್ಯಾಗಾರದಲ್ಲಿ ಅನಿಲ ಸೋರಿಕೆಯಾಗಿದ್ದು, ಅದು ಗಾಳಿಯಲ್ಲಿ ಸೇರಿಕೊಂಡಿದೆ. ಇದರಿಂದಾಗಿ ಕೆಲವು ಗ್ರಾಮಸ್ಥರಿಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದೆ’ ಎಂದಿದ್ದಾರೆ.

‘ಚಿಪ್ಸ್ ರಫ್ತು ಘಟಕವನ್ನು ಕೆಲವು ದಿನಗಳ ಹಿಂದೆ ಬೇರೆಯವರಿಗೆ ಮಾರಾಟ ಮಾಡಲಾಗಿತ್ತು. ಅದರ ನವೀಕರಣದ ಸಂದರ್ಭದಲ್ಲಿ ಅನಿಲ ಸೋರಿಕೆಯಾಗಿರುವ ಸಾಧ್ಯತೆ ಇದೆ. ಘಟನೆ ಬಗ್ಗೆ ತಿಳಿದ ತಕ್ಷಣವೇ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಯು ಸ್ಥಳಕ್ಕಾಗಮಿಸಿ, ಅನಿಲ ಟ್ಯಾಂಕ್‌ನ ಕವಾಟವನ್ನು ಮುಚ್ಚಿದ್ದಾರೆ. ಇದರಿಂದಾಗಬಹುದಾದ ದುರಂತವನ್ನು ತಡೆದಿದ್ದಾರೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.