ಶ್ರೀಕಾಕುಳಂ (ಆಂಧ್ರಪ್ರದೇಶ): ಉಚಿತ ಗ್ಯಾಸ್ ಸಿಲಿಂಡರ್ ವಿತರಣಾ ಯೋಜನೆ ‘ದೀಪಂ–2’ ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈದುಪುರಂ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಿದರು.

‘ದೀಪಂ–2’ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೆ ಒಂದು ಸಿಲಿಂಡರ್ನಂತೆ ವರ್ಷಕ್ಕೆ ಮೂರು ಸಿಲಿಂಡರ್ಗಳನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ನಾಯ್ಡು ನೀಡಿದ್ದ ಆರು ಭರವಸೆಗಳಲ್ಲಿ ಇದೂ ಒಂದು.

ನಾಯ್ಡು ಅವರು ಫಲಾನುಭವಿಯೊಬ್ಬರ ಮನೆಯಲ್ಲಿ ಸ್ವತಃ ಗ್ಯಾಸ್ ಒಲೆಯನ್ನು ಹಚ್ಚಿ, ಚಹಾ ತಯಾರಿಸಿ ‘ದೀಪಂ–2’ಗೆ ಚಾಲನೆ ನೀಡಿದರು. ಬಳಿಕ ಫಲಾನುಭವಿಗಳ ಕುಟುಂಬದ ಬಗ್ಗೆ ವಿಚಾರಿಸಿದರು.

ಮೂಲಗಳ ಪ್ರಕಾರ ‘ದೀಪಂ–2’ ಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ ₹2,684 ಕೋಟಿ ವೆಚ್ಚವಾಗಲಿದೆ.

‘ದೀಪಂ–2’ಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಎನ್.ಮನೋಹರ್, ಕೆ. ರಾಮ್ಮೋಹನ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.