ಬೆಂಗಳೂರು: ಯುವ ನಾಯಕ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡ ಹಿನ್ನೆಲೆ ಬಿಜೆಪಿ 'ಭಾರತ ವಿರೋಧಿ ಕಾಂಗ್ರೆಸ್' ಅಭಿಯಾನವನ್ನು ಸಾಮಾಜಿಕ ತಾಣಗಳಲ್ಲಿ ಆರಂಭಿಸಿದೆ. #AntiIndiaCongress ಎಂಬ ಹ್ಯಾಷ್ ಟ್ಯಾಗ್ಅನ್ನು ಟ್ವಿಟರ್ನಲ್ಲಿ ಟ್ರೆಂಡ್ ಮಾಡಲು ಕರೆ ನೀಡಿದೆ.

ಪ್ರತಿಯೊಬ್ಬ ರಾಷ್ಟ್ರೀಯವಾದಿಯೂ ಸೇರಿಕೊಂಡು #AntiIndiaCongress ಟ್ರೆಂಡ್ ಮಾಡಿ ಎಂದು ಹರಿಯಾಣದ ಬಿಜೆಪಿ ಐಟಿ ಸೆಲ್ನ ಮುಖ್ಯಸ್ಥ ಅರುಣ್ ಯಾದವ್ ಟ್ವೀಟ್ನಲ್ಲಿ ಹೇಳಿದ್ದಾರೆ.

ಬಿಜೆಪಿಯ ಸಮರ್ಥಕರೆಲ್ಲರೂ ಈ ಸಂದರ್ಭ ಟ್ವಿಟರ್ನಲ್ಲಿ ಕ್ರಿಯಾಶೀಲರಾಗಿ ಮತ್ತು ಭಾರತ ವಿರೋಧಿ ಕಾಂಗ್ರೆಸ್ ಟ್ಟಿಟರ್ ಅಭಿಯಾನಕ್ಕೆ ಸಂಬಂಧಿಸಿದ ಟ್ವೀಟ್ಗಳನ್ನು ರೀಟ್ವೀಟ್ ಮಾಡುವ ಮೂಲಕ ತಮ್ಮ ಉಪಸ್ಥಿತಿಯನ್ನು ಸಾಬೀತು ಪಡಿಸಿ ಎಂದು ಅಖಿಲ ಭಾರತ ಸಾಧು ಸಮಾಜದ ಸದಸ್ಯ ಯೋಗಿ ದೇವನಾಥ್ ಕರೆ ನೀಡಿದ್ದಾರೆ.

ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಈ ಅಭಿಯಾನದಡಿ ಸಾಕಷ್ಟು ಸಂಖ್ಯೆಯಲ್ಲಿ ಟ್ವೀಟ್ ಮಾಡುತ್ತಿದ್ದಾರೆ.

ಕನ್ಹಯ್ಯ ಕುಮಾರ್ ಮಂಗಳವಾರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, 'ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲು ಸಾಧ್ಯವಿಲ್ಲ' ಎಂದಿದ್ದಾರೆ.

'ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲು ಸಾಧ್ಯವಿಲ್ಲ': ಇದು ಭಟ್ಟಂಗಿತನವೆಂದ ನಟ ಚೇತನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.