ಲಖನೌ: ಉತ್ತರ ಪ್ರದೇಶದ ರಾಬರ್ಟ್ಸ್‌ಗಂಜ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಬಿಜೆಪಿ ಶಾಸಕ ಭೂಪೇಶ್ ಚೌಬೆ ಅವರುವೃದ್ಧರೊಬ್ಬರ ಕಾಲಿಗೆ ಮಸಾಜ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಘಟನೆ ಅವರ ಬೆಂಬಲಿಗರು ಹಾಗೂ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಇದರ ವಿಡಿಯೊ ಸಾಕಷ್ಟು ವೈರಲ್ ಆಗಿದೆ.

ಚೌಬೆ ಅವರು ಈ ಹಿಂದೆ ಇಂತಹದೇ ಕಾರಣಕ್ಕೆ ಸುದ್ದಿಯಾಗಿದ್ದರು. ಗ್ರಾಮವೊಂದರಲ್ಲಿ ಚುನಾವಣಾ ಪ್ರಚಾರ ಸಭೆಯ ವೇದಿಕೆ ಮೇಲೆ ಅವರು ಬಸ್ಕಿ ಹೊಡೆದಿದ್ದರು. ಇದನ್ನು ಸಮರ್ಥಿಸಿಕೊಂಡಿದ್ದ ಅವರು, ಕಳೆದ ಐದು ವರ್ಷಗಳಲ್ಲಿ ತನಗೆ ತಿಳಿಯದಂತೆ ಏನಾದರೂ ತಪ್ಪುಗಳು ಮಾಡಿದ್ದರೆ ಕ್ಷಮಿಸಿ ಎಂದು ಜನರನ್ನು ಕೇಳಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮರು ಆಯ್ಕೆಯಾಗುವುದಿಲ್ಲ ಎಂಬುದುಚೌಬೆ ಅವರಿಗೆ ಅರ್ಥವಾಗಿದೆ. ಹೀಗಾಗಿ ಅವರು ಜನರನ್ನು ಸೆಳೆಯಲು ಇಂತಹ ಅಗ್ಗದ ಪ್ರಚಾರದ ಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ.

ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಚೌಬೆ, ‘ಮತದಾರರು ದೇವರಿದ್ದಂತೆ. ಹೀಗಾಗಿ ಅವರ ಮನವೊಲಿಸುವುದರಲ್ಲಿ ಯಾವ ತಪ್ಪೂ ಇಲ್ಲ’ ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ನಾವು ದೇವರ ಮುಂದೆ ಕೈಯೊಡ್ಡುತ್ತೇವೆ. ನಾವು ಮಾಡಿರುವ ತಪ್ಪುಗಳನ್ನು ಮನ್ನಿಸು ಎಂದು ಕೇಳಿಕೊಳ್ಳುತ್ತೇವೆ. ಇದೇ ರೀತಿ, ಮತದಾರರನ್ನು ದೇವರು ಎಂದು ಪರಿಗಣಿಸಿ ನಾನು ಅವರ ಕ್ಷಮೆ ಕೇಳಿದೆ. ಅವರನ್ನು ಸಮಾಧಾನಪಡಿಸಿದೆ’ ಎಂದು ಚೌಬೆ ಹೇಳಿದ್ದಾರೆ.

‘ಚೌಬೆ ಅವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕಾಗಿ ಏನನ್ನೂ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಅವರಿಗೆ ಜನರ ನೆನಪಾಗಿದೆ. ಚೌಬೆ ಅವರ ಮನವೊಲಿಕೆ ಯತ್ನಗಳಿಗೆ ಜನರು ಮರುಳಾಗುವುದಿಲ್ಲ. ಜನರು ಅವರಿಗೆ ಪಾಠ ಕಲಿಸಲಿದ್ದಾರೆ’ ಎಂದು ಎಸ್‌ಪಿ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.