ಅಹಮದಬಾದ್: ‘ಚಂದ್ರಯಾನ–3 ಹೊಸ ಭಾರತವನ್ನು ಪ್ರತಿನಿಧಿಸುತ್ತಿದ್ದು, ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡಬೇಕಾದ ವಿಷಯವಾಗಿದೆ. ವಿಕ್ರಮ್ ಸಾರಾಭಾಯಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಲ್ಯಾಂಡರ್‌ಗೆ ‘ವಿಕ್ರಮ್’ ಎಂದು ಹೆಸರಿಟ್ಟಿರುವುದು ಸಂತಸ ತಂದಿದೆ’ ಎಂದು ಇಸ್ರೊ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಅವರ ಪುತ್ರ ಕಾರ್ತೀಕೇಯ ಸಾರಾಭಾಯಿ ಹೇಳಿದರು.

’ಇದು ಕೇವಲ ಭಾರತೀಯರು ಮಾತ್ರವಲ್ಲ ಇಡೀ ಜಗತ್ತೆ ಹೆಮ್ಮೆಪಡುವ ವಿಷಯವಾಗಿದೆ. ಯಾಕೆಂದರೆ ಇಲ್ಲಿಯವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆ ಪ್ರಯತ್ನವನ್ನು ಭಾರತ ಮಾಡಿದೆ. ಎಷ್ಟೋ ದೇಶಗಳು ಪ್ರಯತ್ನ ಮಾಡಿದ್ದರೂ ವಿಫಲವಾಗಿವೆ’ ಎಂದರು.

‘ಲ್ಯಾಂಡರ್‌ಗೆ ತಂದೆಯವರ ಹೆಸರು ಇಟ್ಟಿರುವುದಕ್ಕೆ ತುಂಬಾ ಹೆಮ್ಮೆಯಾಗಿದೆ. ಲ್ಯಾಂಡರ್ ತಯಾರಿಕೆಯಲ್ಲಿ ಹಲವಾರು ಜನರ ಪರಿಶ್ರಮವಿದೆ. ಲ್ಯಾಂಡರ್‌ನ ಒಂದೊಂದು ಭಾಗವನ್ನು ಒಬ್ಬೊಬ್ಬರು ವಿನ್ಯಾಸಗೊಳಿಸಿದ್ದಾರೆ. ವಿದೇಶದ ವಿಜ್ಞಾನಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಇದು ಹೊಸ ಭಾರತವನ್ನು ಪ್ರತಿನಿಧಿಸುತ್ತದೆ’ ಎಂದು ಅವರು ಹೇಳಿದರು.

‘ಚಂದ್ರಯಾನ–2 ಯೋಜನೆ ವಿಫಲವಾದಾಗ ತುಂಬಾ ಬೇಸರವಾಯಿತು. ಆದರೆ ಅದರಿಂದ ತುಂಬಾ ಕಲಿತೆವು. ಚಂದ್ರಯಾನ–2 ವಿಫಲವಾಗಿಲ್ಲ ಬದಲಾಗಿ ಚಂದ್ರಯಾನ–3 ಯೋಜನೆ ಯಶಸ್ವಿಯಾಗಿ ಮುನ್ನುಗ್ಗಲು ಸಹಾಯಕವಾಗಿದೆ. ತಪ್ಪಿನಿಂದ ಕಲಿತಿದ್ದರಿಂದಲೇ ನಾವು ಇಂದು ಯಶಸ್ವಿನ ಕಡೆ ಮುನ್ನುಗ್ಗುತ್ತಿದ್ದೇವೆ. 2047ರ ಕಡೆ ನಾವು ದಾಪುಗಾಲು ಹಾಕುತ್ತಿದ್ದೇವೆ. ಇತರರನ್ನು ಅನುಕರಿಸುವ ಬದಲು ಅವರಿಂದ ಕಲಿಯುವುದು ಉತ್ತಮ ಎಂದು ನಮ್ಮ ತಂದೆ ಹೇಳುತ್ತಿದ್ದರು’ ಎಂದು ತಮ್ಮ ತಂದೆಯ ಮಾತನ್ನು ಉಲ್ಲೇಖಿಸಿದರು.

ಮಗಳು ಮಲ್ಲಿಕಾ ಸಾರಾಭಾಯಿ ಮಾತನಾಡಿ, ‘ನನಗೆ ವಿಜ್ಞಾನ ಮತ್ತು ಪ್ರಯತ್ನದಲ್ಲಿ ಬಹಳ ನಂಬಿಕೆಯಿದೆ. ನನ್ನ ತಂದೆ ಕನಸು ನನಸು ಮಾಡಲು ಇಸ್ರೊ ವಿಜ್ಞಾನಿಗಳು ಸಾಕಷ್ಟು ದಣಿದಿದ್ದಾರೆ. ನಾವು ಶ್ರೇಷ್ಠರು ಎಂದೋ ಅಥವಾ ಇತರ ದೇಶಗಳೊಂದಿಗೆ ಪೈಪೋಟಿ ನಡೆಸಲೆಂದು ವಿಜ್ಞಾನ–ತಂತ್ರಜ್ಞಾನವನ್ನು ಬಳಸಬಾರದು ಬದಲಾಗಿ ಜನರ ಜೀವನವನ್ನು ಉತ್ತಮಗೊಳಿಸಲು ಬಳಸಬೇಕು ಎಂದು ನಮ್ಮ ತಂದೆ ಹೇಳುತ್ತಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.