ಗುವಾಹಟಿ: ಅಸ್ಸಾಂ ರಾಜ್ಯದಾದ್ಯಂತ ನೀರಿನ ಮಟ್ಟವು ವೇಗವಾಗಿ ಇಳಿಕೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಗುವಾಹಟಿಯಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರ (ಆರ್ಎಂಸಿ), ಮುಂದಿನ ಎರಡು ದಿನಗಳವರೆಗೆ ರಾಜ್ಯದಲ್ಲಿ ಮಳೆ ಸುರಿಯುವ ಸಾಧ್ಯತೆಯಿಲ್ಲ ಎಂದು ಮುನ್ಸೂಚನೆ ನೀಡಿದೆ. ಇದು ಪರಿಸ್ಥಿತಿ ಮತ್ತಷ್ಟು ಸುಧಾರಿಸುವ ಭರವಸೆ ನೀಡಿದೆ.

ಮಳೆ ಸಂಬಂಧಿತ ಅವಘಡದಲ್ಲಿ ಮಂಗಳವಾರ ಒಬ್ಬರು ಮೃತಪಟ್ಟಿದ್ದಾರೆ. ಈಗಲೂ ಪ್ರವಾಹದಿಂದಾಗಿ ಸುಮಾರು 4 ಲಕ್ಷ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎಂ) ತಿಳಿಸಿದೆ.

ರಾಜ್ಯದಲ್ಲಿ ಜಲಾವೃತಗೊಂಡಿರುವ ಜಿಲ್ಲೆಗಳ ಸಂಖ್ಯೆ 16ಕ್ಕೆ ಇಳಿಕೆಯಾಗಿದೆ. ಹಾಗಿದ್ದರೂ ಬ್ರಹ್ಮಪುತ್ರ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ತಿಳಿಸಿದೆ.

ಕಛಾಡ್ ಜಿಲ್ಲೆಯಲ್ಲಿ 80,783, ಧುಬ್ರಿಯಲ್ಲಿ 80,544 ಮತ್ತು ನಾಗಾವ್ನಲ್ಲಿ 76,889 ಮಂದಿ ಬಾಧಿತರಾಗಿದ್ದಾರೆ.
.Assam Flood | ನೀರಿನ ಮಟ್ಟ ಇಳಿಕೆ, ಪ್ರವಾಹ ಪರಿಸ್ಥಿತಿ ಸುಧಾರಣೆ.Assam Flood | ಸಂಸತ್ತಿನಲ್ಲಿ ಅಸ್ಸಾಂ ಜನರ ಪರವಾಗಿ ಧ್ವನಿ ಎತ್ತುತ್ತೇನೆ: ರಾಹುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.