ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ: ಪ್ರವಾಹ ಪರಿಸ್ಥಿತಿ ಸುಧಾರಣೆ

Published 14 ಜುಲೈ 2024, 15:24 IST
Last Updated 14 ಜುಲೈ 2024, 15:24 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿಯು ಭಾನುವಾರ ಸುಧಾರಿಸಿದ್ದು, ರಾಜ್ಯದಾದ್ಯಂತ ನೀರಿನ ಮಟ್ಟವು ವೇಗವಾಗಿ ಇಳಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುವಾಹಟಿಯಲ್ಲಿರುವ ಪ್ರಾದೇಶಿಕ ಹವಾಮಾನ ಕೇಂದ್ರವು (ಆರ್‌ಎಂಸಿ) ಬರಾಕ್ ಕಣಿವೆ ಮತ್ತು ಮಧ್ಯ ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ಹೊರತುಪಡಿಸಿ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ.

ಶನಿವಾರ ರಾತ್ರಿ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯು ಧೇಮಾಜಿ ಜಿಲ್ಲೆಯ ಗೋಗಮುಖ್ ರೆವೆನ್ಯೂ ವೃತ್ತದಲ್ಲಿ ಒಬ್ಬರು ಮೃತಪಟ್ಟಿರುವುದಾಗಿ ತಿಳಿಸಿದೆ.

ಇದರೊಂದಿಗೆ ಈ ಬಾರಿಯ ಪ್ರವಾಹ, ಭೂಕುಸಿತ, ಬಿರುಗಾಳಿ ಮತ್ತು ಸಿಡಿಲಿಗೆ ಬಲಿಯಾದವರ ಒಟ್ಟು ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

ಬಾರ್‌ಪೇಟಾ, ಕಛಾಡ್, ದರಾಂಗ್, ಚಿರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್ ಮೊದಲಾದ ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ 8.40 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕಛಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಸುಮಾರು 1.5 ಲಕ್ಷ ಜನರು ಸಂಕಷ್ಟದಲ್ಲಿದ್ದಾರೆ. ಧುಬ್ರಿಯಲ್ಲಿ ಸುಮಾರು 1.27 ಲಕ್ಷ ಜನರು ಮತ್ತು ನಾಗಾವ್‌ನಲ್ಲಿ 88,500ಕ್ಕೂ ಹೆಚ್ಚು ಜನರು ಪ್ರವಾಹದಿಂದಾಗಿ ತೊಂದರೆಗೆ ಒಳಗಾಗಿದ್ದಾರೆ ಎಂದು ಅದು ಹೇಳಿದೆ.

ಆಡಳಿತವು 13 ಜಿಲ್ಲೆಗಳಲ್ಲಿ 221 ಪರಿಹಾರ ಶಿಬಿರಗಳು ಮತ್ತು ಪರಿಹಾರ ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಪ್ರಸ್ತುತ 72,046 ನಿರಾಶ್ರಿತರನ್ನು ನೋಡಿಕೊಳ್ಳುತ್ತಿದೆ. ವ್ಯಾಪಕವಾದ ಪ್ರವಾಹದ ಕಾರಣದಿಂದಾಗಿ, ರಾಜ್ಯದಾದ್ಯಂತ 5.03 ಲಕ್ಷ ಸಾಕುಪ್ರಾಣಿಗಳು ಮತ್ತು ಕೋಳಿಗಳಿಗೆ ಸಮಸ್ಯೆಯಾಗಿದೆ.

ಪ್ರಸ್ತುತ 1,705 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸಾಂನಾದ್ಯಂತ 39,898 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಎಎಸ್‌ಡಿಎಂಎ ತಿಳಿಸಿದೆ.

ಅಪಾಯದ ಮಟ್ಟ ತಲುಪಿದ ನದಿಗಳು: ಪ್ರಸ್ತುತ, ನಿಮತಿಘಾಟ್, ತೇಜ್‌ಪುರ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ನದಿಯು ಅಪಾಯದ ಮಟ್ಟವನ್ನು ಮೀರಿ ತುಂಬಿ ಹರಿಯುತ್ತಿದೆ. ಇದರ ಉಪನದಿಗಳಾದ ಚೆನಿಮರಿಯಲ್ಲಿನ ಬುರ್ಹಿದಿಹಿಂಗ್ ಮತ್ತು ನಂಗ್ಲಮುರಘಾಟ್‌ನಲ್ಲಿ ದಿಸಾಂಗ್ ಅಪಾಯದ ಮಟ್ಟ ಮೀರಿ ಹರಿಯು

ಆಗ್ರಾದಲ್ಲಿ ಭಾನುವಾರ ಪ್ರವಾಸಿಗರು ಮಳೆಯ ನಡುವೆ ತಾಜ್‌ಮಹಲ್ ವೀಕ್ಷಿಸಿದರು

ಆಗ್ರಾದಲ್ಲಿ ಭಾನುವಾರ ಪ್ರವಾಸಿಗರು ಮಳೆಯ ನಡುವೆ ತಾಜ್‌ಮಹಲ್ ವೀಕ್ಷಿಸಿದರು

–ಪಿಟಿಐ ಚಿತ್ರ

‘ಮುಂಬೈನಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ’

ಮುಂಬೈ: ಕಳೆದ 24 ಗಂಟೆಗಳಲ್ಲಿ ಮುಂಬೈ ನಗರ ಮತ್ತು ಉಪನಗರಗಳಲ್ಲಿ ಹೆಚ್ಚು ಮಳೆಯಾಗಿದ್ದು ಭಾನುವಾರ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆಯು ಮಹಾರಾಷ್ಟ್ರದ ಕೊಲ್ಹಾಪುರ ಸತಾರಾ ಸಿಂಧುದುರ್ಗ ಮತ್ತು ರತ್ನಗಿರಿ ಜಿಲ್ಲೆಗಳಿಗೆ 'ರೆಡ್' ಅಲರ್ಟ್ ಘೋಷಿಸಿದ್ದು ಭಾನುವಾರ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.

ಕಳೆದ 24 ಗಂಟೆಗಳಲ್ಲಿ ದಕ್ಷಿಣ ಮುಂಬೈನ ಕೊಲಾಬಾ ವೀಕ್ಷಣಾಲಯವು 92 ಮಿ.ಮೀ ಮಳೆ ದಾಖಲಿಸಿದರೆ ಸಾಂತಾಕ್ರೂಜ್ ವೀಕ್ಷಣಾಲಯ 142 ಮಿ.ಮೀ ಮಳೆಯನ್ನು ದಾಖಲಿಸಿದೆ ಎಂದು ಐಎಂಡಿ ಮಾಹಿತಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ ಮರಾಠವಾಡ ಮತ್ತು ವಿದರ್ಭದ ಕೃಷಿ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗಿದೆ.

ರಾಜಸ್ಥಾನ: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಜೈಪುರ(ಪಿಟಿಐ): ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದ ಜೈಪುರ ಝಾಲಾವರ್‌ ಮತ್ತು ಭರತ್‌ಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ. ಝಾಲಾವರ್‌ ಜಿಲ್ಲೆಯ ಗಂಗಾಧರ್‌ದಲ್ಲಿ 87 ಮಿಮೀ ಮಳೆ ದಾಖಲಾಗಿದ್ದು ಜೈಪುರದ ಮೌಜ್ಮಾಬಾದ್ 86 ಮಿಮೀ ಭರತ್‌ಪುರದ ಡೀಗ  66 ಮಿಮೀ ಮತ್ತು ಜೋಧಪುರದ ಒಸಿಯಾನ್‌ನಲ್ಲಿ 36 ಮಿಮೀ ಮಳೆಯಾಗಿದೆ.

ಜೈಸಲ್ಮೇರ್‌ ಮತ್ತು ಬಾರ್ಮರ್‌ನಲ್ಲಿ ಶನಿವಾರ ಗರಿಷ್ಠ ತಾಪಮಾನ 39.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ ಎಂದು  ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಜೈಪುರ ಕೋಟಾ ಭರತ್‌ಪುರ ಉದಯಪುರ ಬಿಕಾನೇರ್ ಮತ್ತು ಜೋಧಪುರದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಇಲಾಖೆ ತಿಳಿಸಿದೆ.

ದೆಹಲಿ: ಕೆಲವೆಡೆ ಮಳೆ

ನವದೆಹಲಿ: ಹಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದ ದೆಹಲಿಯಲ್ಲಿ ಭಾನುವಾರ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗುವ ಮೂಲಕ ಪರಿಸ್ಥಿತಿ ಸುಧಾರಿಸುತ್ತಿದೆ. ಭಾನುವಾರ ಗರಿಷ್ಠ ತಾಪಮಾನವು  37.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಈ ವರ್ಷದಲ್ಲಿ ದಾಖಲಾದ ಸರಾಸರಿ ತಾಪಮಾನಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್  ಅಧಿಕವಾಗಿದೆ ಎಂದು  ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು ಸಂಜೆ ವೇಳೆಗೆ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT