‘ಇದು, ಹಳೆಯ ಆದೇಶವಾಗಿದೆ. ರಾಜ್ಯ ಸರ್ಕಾರದ ಸೇವಾ ನಿಯಮಗಳ ಪ್ರಕಾರ, ನೌಕರರು ಎರಡನೇ ಮದುವೆಯಾಗಲು ಅವಕಾಶ ಇರುವುದಿಲ್ಲ. ಒಂದು ವೇಳೆ ತಮ್ಮ ಧರ್ಮದಲ್ಲಿ ಎರಡನೇ ಮದುವೆಗೆ ಅವಕಾಶವಿದ್ದರೂ, ಸರ್ಕಾರದ ಪೂರ್ವಾನುಮತಿ ಅಗತ್ಯ. ಸರ್ಕಾರ ಅನುಮತಿ ನೀಡಬಹುದು ಅಥವಾ ನೀಡದೆಯೇ ಇರಬಹುದು’ ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.