ಕೋಲ್ಕತ್ತ: ಈ ವರ್ಷದ ಆಗಸ್ಟ್ನಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರಾದ ಪ್ರಯಾಂಗು ಪಾಂಡೆ ಮತ್ತು ಸಂಗಡಿಗರ ಬೆಂಗಾವಲು ವಾಹನದ ಮೇಲೆ ದಾಳಿಗೆ ಸಂಬಂಧಿಸಿದಂತೆ 12 ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸದಥೆ(ಎನ್ಐಎ) ಚಾರ್ಜ್ಶೀಟ್ ಸಲ್ಲಿಸಿದೆ.

ಆರೋಪಿಗಳನ್ನು ಮೊಹಮ್ಮದ್ ಅಬೇದ್ ಖಾನ್ ಅಲಿಯಾಸ್ ಬಂಟಿ, ಮೊಹಮ್ಮದ್ ಆರಿಫ್, ವಸೀಮುದ್ದೀನ್ ಅನ್ಸಾರಿ ಅಲಿಯಾಸ್ ಭುಮ, ಮೊಹಮ್ಮದ್ ನಾಸೀಂ, ಫಿರ್ದೂಶ್ ಇಕ್ಬಾಲ್, ಮೊಹಮ್ಮದ್ ತನ್ವೀರ್, ಸಂಜಯ್ ಶಾ, ಮೊಹಮ್ಮದ್ ಚಾಂದ್, ಆಕಾಶ್ ಸಿಂಗ್, ಮೊಹಮ್ಮದ್ ಸೊಹೈಬ್ ಅಕ್ತರ್, ಮೊಹಮ್ಮದ್ ಅಕ್ಬರ್ ಮತ್ತು ಸಾಗರ್ ಸಿಂಗ್ ಎಂದು ಗುರುತಿಸಲಾಗಿದೆ.

ಇಲ್ಲಿನ ಎನ್ಐಎ ಕೋರ್ಟ್ಗೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ದಾಳಿ ಹಿಂದೆ ಕ್ರಿಮಿನಲ್ ಸಂಚು ಇರುವುದನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಈ 12 ಮಂದಿ, ಪಾಂಡೆ ಪರಿವಾರದ ಮೇಲಿನ ದಾಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಕಂಡುಬಂದಿದೆ. ಇತ್ತೀಚಿನ ದಾಳಿ ವೇಳೆ ಚಾಲಕ ರವಿವರ್ಮಾ ಮತ್ತು ಆಪ್ತ ರಬಿ ಸಿಂಗ್ಗೆ ಗುಂಡು ತಗುಲಿದೆ.

ಆಗಸ್ಟ್ 28ರಂದು ಭಟ್ಪಾರಾದ ಆಂಗ್ಲೋ ಇಂಡಿಯನ್ ಜೂಟ್ ಮಿಲ್ ಸಿಬ್ಬಂದಿ ಕ್ವಾರ್ಟರ್ಸ್ ಗೇಟ್ ನಂಬರ್ 3ರ ಬಳಿ ಪಾಂಡೆ ಮತ್ತು ಅವರ ತಂಡ ನಿಂತಿದ್ದಾಗ ಸ್ಫೋಟಕ ಮತ್ತು ಬಂದೂಕುಗಳಿಂದ ದಾಳಿ ನಡೆಸಲಾಗಿತ್ತು. ಮಾಜಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸಕ್ಕೆ ಬೆಂಗಾವಲು ಪಡೆ ತೆರಳುತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.