ನಾಗ್ಪುರ: ಔಡಿ ಕಾರು ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಅವರ ಪುತ್ರ ಸಂಕೇತ್ ಮತ್ತು ಆತನ ಸ್ನೇಹಿತರು ಅಪಘಾತಕ್ಕೂ ಮೊದಲು ಬಾರ್‌ಗೆ ಭೇಟಿ ನೀಡಿದ್ದ ಸಿಸಿಟಿವಿ ದೃಶ್ಯಾವಳಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾರು ಡಿಕ್ಕಿಗೂ ಮೊದಲು ಆರೋಪಿಗಳು ‘ಲಾ ಹೋರೆ ಬಾರ್’ನಲ್ಲಿ ಇದ್ದ ಸಿಸಿಟಿವಿ ದ್ಯಶ್ಯಾವಳಿಗಳು ಕಾಣೆಯಾಗಿವೆ. ಬುಧವಾರ ಡಿವಿಆರ್ (ಡಿಜಿಟಲ್ ವಿಡಿಯೊ ರೆಕಾರ್ಡರ್) ಅನ್ನು ವಶಪಡಿಸಿಕೊಂಡಿದ್ದೇವೆ. ಅದನ್ನು ವಿಧಿವಿಜ್ಞಾನ ಪರಿಶೋಧನೆಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಿಸಿಟಿವಿ ದೃಶ್ಯಾವಳಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ತನಿಖಾ ತಂಡಕ್ಕೆ ನೀಡಲು ಲಾ ಹೋರೆ ಬಾರ್ ಮ್ಯಾನೇಜರ್ ಮಂಗಳವಾರ ನಿರಾಕರಿಸಿದ್ದರು. ಕಾನೂನು ಕ್ರಮದ ಎಚ್ಚರಿಕೆ ಬಳಿಕ ದೃಶ್ಯಾವಳಿಗಳನ್ನು ನೀಡಿದರು. ಆದರೆ, ಭಾನುವಾರ ರಾತ್ರಿಯಿಂದಲೂ ಯಾವುದೇ ದೃಶ್ಯಾವಳಿಗಳಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.

ಸಂಕೇತ್ ಬವಾಂಕುಲೆ ಅವರಿಗೆ ಸೇರಿದ್ದ ಔಡಿ ಕಾರು, ಸೋಮವಾರ ನಸುಕಿನ ಜಾವದಲ್ಲಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು. ವಾಹನಗಳು ಜಖಂಗೊಂಡಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
.ಮಹಾರಾಷ್ಟ್ರ BJP ಅಧ್ಯಕ್ಷನ ಮಗನ ಔಡಿ ಡಿಕ್ಕಿ; ಹಲವು ವಾಹನಗಳು ಜಖಂ, ಇಬ್ಬರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.