ಅಯೋಧ್ಯೆ: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಾಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಸೇರಿದೆ ಎಂಬ ವಿವಾದದ ನಡುವೆ ದೇಶದಾದ್ಯಂತ ಮಾರಾಟವಾಗುತ್ತಿರುವ ತುಪ್ಪದ ಶುದ್ಧತೆಯ ಬಗ್ಗೆ ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಅವರು ಪ್ರಶ್ನಿಸಿದ್ದಾರೆ.

ಸತ್ಯೇಂದ್ರ ದಾಸ್ ಅವರು, ಹೊರಗಿನ ಸಂಸ್ಥೆಗಳು ತಯಾರಿಸುವ ಪ್ರಸಾದವನ್ನು ದೇಶದ ಎಲ್ಲಾ ಪ್ರಮುಖ ದೇವಾಲಯಗಳು ಮತ್ತು ಮಠಗಳು ಸಂಪೂರ್ಣ ನಿಷೇಧಿಸಬೇಕು. ದೇವಾಲಯದ ಅರ್ಚಕರ ಮೇಲ್ವಿಚಾರಣೆಯಲ್ಲೇ ಪ್ರಸಾದ ತಯಾರಾಗಬೇಕು ಎಂದು ಒತ್ತಾಯಿಸಿದ್ದಾರೆ.

'ತಿರುಪತಿ ಬಾಲಾಜಿಯ ಬಾಲಾಜಿ ದೇವಾಲಯದಲ್ಲಿ ಪ್ರಸಾದ ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದವು ದೇಶದಾದ್ಯಂತ ಹರಡುತ್ತಿದೆ. ದಾರ್ಶನಿಕರು ಮತ್ತು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತನಿಖೆಗೆ ಒತ್ತಾಯಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.
.ಲಡ್ಡು ತಯಾರಿಕೆ: ತಿರುಪತಿ ಅರ್ಚಕರಿಗೆ ಮೈಸೂರಲ್ಲಿ ತರಬೇತಿ.4 ದಿನದಲ್ಲಿ 14 ಲಕ್ಷ ತಿರುಪತಿ ಲಾಡು ಮಾರಾಟ: ವಿವಾದದ ನಡುವೆಯೂ ಕುಸಿಯದ ಬೇಡಿಕೆ.
'ದೇವರಿಗೆ ಸಲ್ಲಿಸುವ ಪ್ರಸಾದವನ್ನು ದೇವಾಲಯದ ಅರ್ಚಕರ ಉಸ್ತುವಾರಿಯಲ್ಲೇ ತಯಾರಿಸಬೇಕು' ಎಂದು ದೇಶದ ಎಲ್ಲ ಮಠ, ಮಂದಿರಗಳಿಗೆ ಮನವಿ ಮಾಡಿದ್ದಾರೆ.

ನೈವೇದ್ಯಕ್ಕೆ ಬಳಸುವ ಪ್ರಸಾದಕ್ಕೆ ಮಾಂಸ ಮತ್ತು ಕೊಬ್ಬನ್ನು ಬೆರೆಸಿ ದೇಶದ ಮಠ–ಮಂದಿರಗಳನ್ನು ಅಪವಿತ್ರಗೊಳಿಸುವ ಅಂತರರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ದಾಸ್, ದೇಶದಾದ್ಯಂತ ಮಾರಾಟವಾಗುತ್ತಿರುವ ಎಣ್ಣೆ ಹಾಗೂ ತುಪ್ಪದ ಪರಿಶುದ್ಧತೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪುನರುಚ್ಚರಿಸಿದ್ದಾರೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ಎಣ್ಣೆ ಹಾಗೂ ತುಪ್ಪದ ಶುದ್ಧತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
.ಲಡ್ಡು ವಿವಾದದ ನಂತರ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ: ಬಾಲಚಂದ್ರ ಜಾರಕಿಹೊಳಿ.EXPLAINER: ತಿರುಪತಿ ಲಡ್ಡು ವಿವಾದ: ತುಪ್ಪ ಎಲ್ಲಿಯದು? ನಾಯಕರು ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.