ಮುಂಬೈ: ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಸೇರಿ ಮೂವರು ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು ಲುಕೌಟ್ ನೋಟಿಸ್ ಹೊರಡಿಸಿದ್ದಾರೆ.

ದೇಶಬಿಟ್ಟು ಪರಾರಿಯಾಗದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ವಿಮಾನನಿಲ್ದಾಣಗಳು ಮತ್ತು ಬಂದರುಗಳಲ್ಲಿ ಅವರು ಕಂಡುಬಂದರೆ ಕೂಡಲೇ ಬಂಧಿಸಲಾಗುತ್ತದೆ.

ಲುಕೌಟ್ ನೋಟಿಸ್ನಲ್ಲಿ ಹೆಸರು ಉಲ್ಲೇಖಿಸಿರುವ ಇನ್ನಿಬ್ಬರು ಆರೋಪಿಗಳಾದ ಶುಭಂ ಲೋಂಕರ್ ಮತ್ತು ಮೊಹಮ್ಮದ್ ಜೀಶನ್ ಅಖ್ತರ್ ಸಹ ಸಂಚುಕೋರರು.

ಮುಂಬೈ ಅಪರಾಧ ದಳದ ತಂಡಗಳನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

ಅಕ್ಟೋಬರ್ 12ರಂದು ಮಗ, ಶಾಸಕ ಜೀಶನ್ ಸಿದ್ದೀಕಿ ಕಚೇರಿ ಹೊರಗೆ ನಿಂತಿದ್ದಾಗ ಸಿದ್ದೀಕಿ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಪ್ರಕರಣ ಸಂಬಂಧ ಪೊಲೀಸರು ಈವರೆಗೆ 4 ಮಂದಿಯನ್ನು ಬಂಧಿಸಿದ್ದಾರೆ. ಶೂಟರ್ಗಳಾದ ಹರಿಯಾಣ ನಿವಾಸಿ ಗುರ್ಮೈಲ್ ಬಲ್ಜೀತ್ ಸಿಂಗ್(23), ಉತ್ತರ ಪ್ರದೇಶ ಮೂಲದ ಧರ್ಮರಾಜ ರಾಜೇಶ್ ಕಶ್ಯಪ್(19), ಸಹ ಸಂಚುಕೋರರಾದ ಹರೀಶ್ ಕುಮಾರ್ ಬಾಲಕ್ರಮ್ ನಿಶಾದ್(23), ಶೂಭಂ ಲೋಂಕರ್ ಸಹೋದರ ಪ್ರವೀಣ್ ಲೋಂಕರ್ನನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.