ಅಹಮದಾಬಾದ್: ಕಾಂಗ್ರೆಸ್ನ ಗುಜರಾತ್ ಘಟಕದ ಕಚೇರಿಯ ಕಟ್ಟಡದ ಮೇಲೆ ಬಜರಂಗದಳದ ಕೆಲ ಕಾರ್ಯಕರ್ತರು ‘ಹಜ್ ಹೌಸ್’ ಎಂದು ಮರು ನಾಮಕರಣ ಮಾಡಿರುವ ಪೋಸ್ಟರ್ಗಳನ್ನು ಶುಕ್ರವಾರ ಅಂಟಿಸಿದ್ದಾರೆ.

ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಗುಜರಾತ್ನ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೀಶ್ ಠಾಕೂರ್ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ವಿರುದ್ಧ ತಮ್ಮ ಪ್ರತಿಭಟನೆ ದಾಖಲಿಸಲು ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ ಎಂದು ಬಜರಂಗದಳದ ಸಹೋದರ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಹೇಳಿದೆ.

ಬುಧವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕೂರ್, ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಇರಬೇಕು ಎಂಬ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಭಿಪ್ರಾಯ ಬೆಂಬಲಿಸಿ ಮತ್ತು ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ಈ ಸಿದ್ಧಾಂತದಿಂದ ವಿಮುಖವಾಗುವುದಿಲ್ಲ ಎಂದು ಹೇಳಿದ್ದರು.

ಪಕ್ಷದ ಕೇಂದ್ರ ಕಚೇರಿ ರಾಜೀವ್ ಗಾಂಧಿ ಭವನದ ಮೇಲೆ ಬಜರಂಗ ದಳ ಕಾರ್ಯಕರ್ತರು ನಡೆಸಿದ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರಮನೀಶ್ ದೋಷಿ,ಈ ಯುವಕರು ಭ್ರಮನಿರಸಗೊಂಡಿದ್ದಾರೆ.ಆಡಳಿತಾರೂಢ ಬಿಜೆಪಿ ‘ಗೂಂಡಾಗಿರಿ’ ಪ್ರಾಯೋಜಿಸುತ್ತಿದೆ ಎಂದು ಆರೋಪಿಸಿದರು.

ವಿಎಚ್ಪಿ ಹಂಚಿಕೊಂಡಿರುವ ವಿಡಿಯೊದಲ್ಲಿ ಪ್ರತಿಭಟನಾಕಾರರು ಪಕ್ಷದ ಕಚೇರಿಯ ಗೋಡೆಗಳ ಮೇಲೆ ಸ್ಪ್ರೇ ಬಣ್ಣಗಳನ್ನು ಬಳಸಿ ‘ಹಜ್ ಹೌಸ್’ ಎಂದು ಬರೆದಿದ್ದಾರೆ ಹಾಗೂ ಆವರಣದಲ್ಲಿ ಹಾಕಲಾದ ಬ್ಯಾನರ್ಗಳಲ್ಲಿ ವಿವಿಧ ಕಾಂಗ್ರೆಸ್ ನಾಯಕರ ಫೋಟೊಗಳನ್ನು ವಿರೂಪಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.