ನವದೆಹಲಿ: ರೈತ ವಿರೋಧಿ ಭಾವನೆ ಕಾಂಗ್ರೆಸ್ನ ಡಿಎನ್ಎನಲ್ಲಿಯೇ ಇದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ, ಮೋದಿ ಸರ್ಕಾರ ಕಳೆದ 10 ವರ್ಷದ ಆಡಳಿತದಲ್ಲಿ ಕೃಷಿ ವಲಯದಲ್ಲಿ ಏನನ್ನೂ ಮಾಡಿಲ್ಲ, ಕೊನೆ ಪಕ್ಷ ಬಜೆಟ್ನಲ್ಲಿಯೂ ಯಾವುದೇ ನೆರವು ನೀಡಿಲ್ಲ. ಮೋದಿ ಸರ್ಕಾರ ಕೃಷಿ ವಲಯಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ಚೌಹಾಣ್, ‘ರೈತ ವಿರೋಧಿ ಎಂಬುದು ಕಾಂಗ್ರೆಸ್ನ ಡಿಎನ್ಎಯಲ್ಲಿದೆ. ಮೊದಲಿನಿಂದಲೂ ಕಾಂಗ್ರೆಸ್ನ ಆದ್ಯತೆಗಳು ತಪ್ಪಾಗಿದೆ ಎಂದ ಚೌಹಾಣ್, ಮೋದಿ ಸರ್ಕಾರದ ಅವಧಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವಿವರಿಸಿದರು

‘ರೈತರು ರಸಗೊಬ್ಬರಗಳನ್ನು ಅತಿಹೆಚ್ಚು ಸಬ್ಸಿಡಿಗಳ ಮೂಲಕ ಪಡೆಯುತ್ತಿದ್ದಾರೆ ಜತೆಗೆ ಕೃಷಿಗೆ ಅಗತ್ಯವಾದ ಪೋಷಕಾಂಶದ ಉತ್ಪನ್ನಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿದ್ದಾರೆ’ ಎಂದರು.

‘ಪ್ರಸ್ತುತ ಸರ್ಕಾರವು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು, ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡುವುದು, ವಿಪತ್ತುಗಳ ಸಂದರ್ಭದಲ್ಲಿ ಸಾಕಷ್ಟು ಪರಿಹಾರ ಸೇರಿದಂತೆ ಹಲವು ಆದ್ಯತೆಗಳನ್ನು ನಿಗದಿಪಡಿಸಿದೆ. ಮೋದಿ ಸರ್ಕಾರ ರೈತರನ್ನು ದೇವರೆಂದು ಪರಿಣಗಿಸಿದೆಯೆ ಹೊರತು, ವೋಟ್ಬ್ಯಾಕ್ನಂತೆ ಅಲ್ಲ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.