ಶೆಗಾವ್ (ಮಹಾರಾಷ್ಟ್ರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯಲ್ಲಿ, ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಭಾಗಿಯಾಗಿದ್ದಾರೆ.

ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರ ಯಾತ್ರೆ ಸಾಗುತ್ತಿದ್ದು, ಶುಕ್ರವಾರ ಮುಂಜಾನೆ ತುಷಾರ್ ಅವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಭಾರತ್ ಜೋಡೊ ಯಾತ್ರೆಯಲ್ಲಿ ತಾನು ಭಾಗಿಯಾಗುತ್ತೇನೆ ಎಂದು ತುಷಾರ್ ಅವರು, ಗುರುವಾರವೇ ಟ್ವೀಟ್ ಮಾಡಿದ್ದರು.

‘ನವೆಂಬರ್ 18ರಂದು ನಾನು ಶೆಗಾವ್‌ನಲ್ಲಿ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗಿಯಾಗಲಿದ್ದೇನೆ. ಶೆಗಾವ್ ನನ್ನ ಜನ್ಮಸ್ಥಳ ಕೂಡ‘ ಎಂದು ಅವರು ಟ್ವೀಟ್ ಮಾಡಿದ್ದರು.

ತುಷಾರ್ ಅವರು ಯಾತ್ರೆಯಲ್ಲಿ ಭಾಗಿಯಾಗಿದ್ದು ‘ಐತಿಹಾಸಿಕ‘ ಎಂದು ಕಾಂಗ್ರೆಸ್ ಬಣ್ಣಿಸಿದೆ.

‘ರಾಹುಲ್ ಗಾಂಧಿ ಹಾಗೂ ತುಷಾರ್ ಗಾಂಧಿ ಅವರು, ಜವಹರಲಾಲ್ ನೆಹರೂ ಹಾಗೂ ಮಹಾತ್ಮ ಗಾಂಧಿಯವರ ಮೊಮ್ಮಕ್ಕಳಾಗಿದ್ದು, ಇಬ್ಬರು ಮುತ್ಸದಿ ನಾಯಕರ ಪರಂಪರೆಯನ್ನು ಇವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ‘ ಎಂದು ಕಾಂಗ್ರೆಸ್ ಹೇಳಿದೆ.

‘ನೀವು ಸಂವಿಧಾನವನ್ನು ಅಪಾಯಕ್ಕೆ ತಳ್ಳಬಹುದು. ಆದರೆ ಮುಗಿಸಲು ಬಿಡುವುದಿಲ್ಲ ಎನ್ನುವ ಸಂದೇಶ ಇವರಿಬ್ಬರ ನಡಿಗೆಯಿಂದ ಆಡಳಿತ ವರ್ಗಕ್ಕೆ ರವಾನೆಯಾಗಿದೆ‘ ಎಂದು ಕಾಂಗ್ರೆಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.