ನವದೆಹಲಿ: ದೆಹಲಿ ಹಾಗೂ ಮುಂಬೈ ನಡುವಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಭಾರತ್ಮಾಲಾ ಪರಿಯೋಜನೆಯಡಿ ರಾಜಸ್ಥಾನದಲ್ಲಿ 60 ಕಿ.ಮೀ. ಉದ್ದದ ಗ್ರೀನ್ಫೀಲ್ಡ್ ಹೆದ್ದಾರಿ ನಿರ್ಮಾಣವಾಗಲಿದೆ.

ಮುಕುಂದ್ರ ಪರ್ವತ ಹುಲಿ ಸಂರಕ್ಷಿತಾರಣ್ಯದಲ್ಲಿ ಈ ಹೆದ್ದಾರಿಯು ಸುರಂಗದ ಮುಖಾಂತರ ಸಾಗಲಿದೆ. ರಾಜಸ್ಥಾನದ ಭೆಂಡಾ ಹೀರಾ ಹಳ್ಳಿಯಿಂದ ಮೂಂದಿಯಾ ಹಳ್ಳಿಯವರೆಗೆ ಎಂಟು ಪಥಗಳ ಹೆದ್ದಾರಿ ನಿರ್ಮಾಣವಾಗಲಿದ್ದು, ಗುರುಗ್ರಾಮ, ಭರತ್ಪುರ, ಕೋಟಾ ಸೇರಿ ಹಲವು ನಗರಕ್ಕೆ ಈ ಹೆದ್ದಾರಿಯಿಂದ ಸಂಪರ್ಕ ದೊರೆಯಲಿದೆ ಎಂದು ಪರಿಸರ ಇಲಾಖೆಯ ಮೂಲಗಳು ತಿಳಿಸಿವೆ.

‘ಹುಲಿ ಸಂರಕ್ಷಿತಾರಣ್ಯದ 500 ಮೀ ನಂತರದಲ್ಲಿ ಸುರಂಗದ ಪ್ರವೇಶ ಹಾಗೂ ನಿರ್ಗಮನವಿರಬೇಕು ಎಂದು ವನ್ಯಜೀವಿ ರಾಷ್ಟ್ರೀಯ ಮಂಡಳಿಯು (ಎನ್ಬಿಡಬ್ಲ್ಯುಎಲ್) ಸೂಚಿಸಿದೆ. ಪರಿಸರಕ್ಕೆ ಹಾಗೂ ವನ್ಯಜೀವಿಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.