ನವದೆಹಲಿ (ಪಿಟಿಐ): ರಾಜ್ಯದಲ್ಲಿ ಕೈಗೊಂಡಿದ್ದ ಜಾತಿ ಗಣತಿಗೆ ತಡೆ ನೀಡಿ ಪಟ್ನಾ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಹಾರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

‘ಜಾತಿ ಗಣತಿಯನ್ನು ತಡೆದರೆ ಭಾರಿ ನಷ್ಟವಾಗಲಿದೆ. ಜಾತಿ ಆಧಾರಿತ ದತ್ತಾಂಶ ಸಂಗ್ರಹಿಸುವುದು ಸಂವಿಧಾನದ 15 ಮತ್ತು 16ನೇ ವಿಧಿ ನೀಡಿರುವ ಅಧಿಕಾರ’ ಎಂದು ಮೇ 4ರಂದು ಸಲ್ಲಿಸಿರುವ ಮೇಲ್ಮನವಿಯಲ್ಲಿ ಬಿಹಾರ ಸರ್ಕಾರ ಹೇಳಿದೆ.

ಜಾತಿ ಗಣತಿಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಮುಂದಿನ ವಿಚಾರಣೆಯನ್ನು ಪಟ್ನಾ ಹೈಕೋರ್ಟ್ ಜುಲೈ 3ರಂದು ನಡೆಸಲಿದೆ.

ಮೊದಲ ಸುತ್ತಿನ ಜಾತಿ ಗಣತಿಯನ್ನು ಜನವರಿ 7ರಿಂದ 21ರ ವರೆಗೆ ನಡೆಸಲಾಗಿದೆ. ಎರಡನೇ ಸುತ್ತಿನ ಗಣತಿ ಏಪ್ರಿಲ್ 15ರಂದು ಆರಂಭಗೊಂಡಿದ್ದು, ಮೇ 15ರಂದು ಮುಗಿಯಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.