ನವದೆಹಲಿ: ಸ್ಪೈಸ್‌ಸೆಟ್ ಖಾಸಗಿ ವಿಮಾನಯಾನ ಸಂಸ್ಥೆಯ ಜೈವಿಕ ಇಂಧನ ಚಾಲಿತ ವಿಮಾನ ಸೋಮವಾರ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು.

ಇದರೊಂದಿಗೆ ಸ್ಪೈಸ್‌ಜೆಟ್‌ನ ಬಾಂಬರ್‌ಡೈರ್ ಕ್ಯೂ 400 ದೇಶದ ಮೊದಲ ಜೈವಿಕ ಇಂಧನ ಚಾಲಿತ ವಿಮಾನ ಎಂಬ ಹೊಸ ಇತಿಹಾಸ ನಿರ್ಮಿಸಿತು.

ಡೆಹ್ರಾಡೂನ್‌ನಿಂದ 20 ಪ್ರಯಾಣಿಕರನ್ನು ಹೊತ್ತು ಹೊರಟ ವಿಮಾನ 25 ನಿಮಿಷಗಳಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯಿತು.

ಸ್ಪೈಸ್‌ಜೆಟ್ ಸಂಸ್ಥೆ, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳು ಮತ್ತು ವೈಮಾನಿಕ ಎಂಜಿನಿಯರ್‌ಗಳು ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದರು.

ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಡೆಹ್ರಾಡೂನ್‌ನಲ್ಲಿ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದರು. ನಿತಿನ್ ಗಡ್ಕರಿ ನೇತೃತ್ವದ ಕೇಂದ್ರ ಸಚಿವರ ತಂಡ ದೆಹಲಿಯಲ್ಲಿ ವಿಮಾನವನ್ನು ಬರಮಾಡಿಕೊಂಡರು.

ಪ್ರಾಯೋಗಿಕ ಹಾರಾಟದಲ್ಲಿ ಶೇ 75ರಷ್ಟು ಸಾಂಪ್ರದಾಯಿಕ ಇಂಧನದ ಜತೆ ಶೇ 25ರಷ್ಟು ಜತ್ರೋಫಾ ಕಾಯಿಗಳಿಂದ ತಯಾರಿಸಿದ ಜೈವಿಕ ಇಂಧನ ಬೆರೆಸಲಾಗಿತ್ತು.

ಜೈವಿಕ ಇಂಧನ ವಾಯುಮಾಲಿನ್ಯ ಶೇ 15ರಷ್ಟು ತಗ್ಗಿಸಲಿದೆ ಎಂದು ಸ್ಪೈಸ್‌ಜೆಟ್ ಅಧ್ಯಕ್ಷ ಅಜಯ್ ಸಿಂಗ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.