ನವದೆಹಲಿ: ಕೇಂದ್ರ ಸರ್ಕಾರವು ಆರಂಭಿಸಿರುವ ವಿಜ್ಞಾನ ರತ್ನ ಪುರಸ್ಕಾರ ಎಂಬ ಪ್ರಶಸ್ತಿಯ ಮೊದಲ ವಿಜೇತರಾಗಿ ಜೈವಿಕರಸಾಯನ ವಿಜ್ಞಾನಿ ಗೋವಿಂದರಾಜನ್ ಪದ್ಮನಾಭನ್ ಅವರು ಆಯ್ಕೆಯಾಗಿದ್ದಾರೆ.

33 ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು ಬುಧವಾರ ಪ್ರಕಟಿಸಿದ್ದು, ಇದರಲ್ಲಿ 18 ಯುವ ವಿಜ್ಞಾನಿಗಳು ವಿಜ್ಞಾನ ಯುವ ಪುರಸ್ಕಾರ ಪ್ರಶಸ್ತಿಗೆ ಹಾಗೂ 13 ಸಾಧಕರಿಗೆ ವಿಜ್ಞಾನ ಶ್ರೀ ಪುರಸ್ಕಾರ ಲಭಿಸಿದೆ. ಚಂದ್ರಯಾನ–3ರ ತಂಡಕ್ಕೆ ವಿಜ್ಞಾನ ತಂಡ ಪ್ರಶಸ್ತಿ ಲಭಿಸಿದೆ.

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆ ಹಾಗೂ ವಿನೂತನ ಆವಿಷ್ಕಾರಗಳಿಗಾಗಿ ರಾಷ್ಟ್ರೀಯ ವಿಜ್ಞಾನ ಪುರಸ್ಕಾರವನ್ನು ಕೇಂದ್ರ ಸರ್ಕಾರ 2024ರ ಆರಂಭದಲ್ಲಿ ಸ್ಥಾಪಿಸಿತು. ಆ ಮೂಲಕ ಸಂಶೋಧಕರು, ತಂತ್ರಜ್ಞರು ಹಾಗೂ ಹೊಸ ಆವಿಷ್ಕಾರಗಳ ಮೂಲಕ ಸಮಾಜದಲ್ಲಿ ಬದಲಾವಣೆಗೆ ಕಾರಣರಾದವರನ್ನು ಗುರುತಿಸುವ ಉದ್ದೇಶ ಈ ಪ್ರಶಸ್ತಿಯದ್ದು ಎಂದು ಸರ್ಕಾರ ಹೇಳಿತ್ತು.

ಅದರಂತೆ ವಿಜ್ಞಾನ ಶ್ರೀ ಪ್ರಶಸ್ತಿಯನ್ನು ಖಗೋಳಭೌತ ವಿಜ್ಞಾನಿ ಅನ್ನಪೂರಿಣಿ ಸುಬ್ರಮಣಿಯನ್, ಕೃಷಿ ವಿಜ್ಞಾನಿ ಸಿ. ಅನಂತರಾಮಕೃಷ್ಣನ್, ಅಣು ಶಕ್ತಿ ವಿಜ್ಞಾನಿ ಅವೇಶ್ ಕುಮಾರ್ ತ್ಯಾಗಿ, ಜೀವವಿಜ್ಞಾನಿಗಳಾದ ಪ್ರೊ. ಉಮೇಶ್ ವರ್ಷಣಿ ಹಾಗೂ ಪ್ರೊ. ಜಯಂತ ಬಾಲಚಂದ್ರ ಉದ್ಗಾಂವಕರ್, ಭೂವಿಜ್ಞಾನಿ ಪ್ರೊ. ಸೈಯದ್ ವಾಜಿ, ಎಂಜಿನಿಯರಿಂಗ್ ವಿಜ್ಞಾನದ ಪ್ರೊ. ಭೀಮ್ ಸಿಂಗ್, ಗಣಿತ ಹಾಗೂ ಗಣಕ ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಪ್ರೊ. ಆದಿಮೂರುತಿ ಆದಿ ಹಾಗೂ ಪ್ರೊ. ರಾಹುಲ್ ಮುಖರ್ಜಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರೊ. ಡಾ. ಸಂಜಯ್ ಬೆಹಾರಿ, ಭೌತವಿಜ್ಞಾನದಲ್ಲಿ ಪ್ರೊ. ಲಕ್ಷ್ಮಣ ಮುತ್ತುಸ್ವಾಮಿ ಹಾಗೂ ಪ್ರೊ. ನಬಾ ಕುಮಾರ್ ಮಂಡಲ್ ಹಾಗೂ ತಂತ್ರಜ್ಞಾನ ಮತ್ತು ಆವಿಷ್ಕಾರ ವಿಭಾಗದಲ್ಲಿ ರೋಹಿತ್ ಶ್ರೀವಾಸ್ತವ ಅವರಿಗೆ ಪ್ರಶಸ್ತಿ ಲಭಿಸಿದೆ.

ವಿಜ್ಞಾನ ಯುವ ಪ್ರಶಸ್ತಿ: ಎಸ್.ಎಲ್. ಕೃಷ್ಣಮೂರ್ತಿ, ಕೃಷಿ ವಿಜ್ಞಾನಿ ಸ್ವರೂಪ್ ಕುಮಾರ್ ಪರಿದಾ, ಜೈವಿಕ ವಿಜ್ಞಾನದಲ್ಲಿ ರಾಧಾಕೃಷ್ಣನ್ ಮಹಾಲಕ್ಷ್ಮಿ ಹಾಗೂ ಪ್ರೊ. ಅರವಿಂದ ಪೆನ್ಮತ್ಸಾ, ರಸಾಯನವಿಜ್ಞಾನ ವಿಷಯದಲ್ಲಿ ವಿವೇಕ್ ಪಾಲ್ಶೆಟ್ಟಿವಾರ್ ಹಾಗೂ ವಿಶಾಲ್ ರೈ, ಭೂ ವಿಜ್ಞಾನದಲ್ಲಿ ರಾಕ್ಸಿ ಮಾಥ್ಯೂ ಕೋಲ್, ಎಂಜಿನಿಯರಿಂಗ್ ವಿಜ್ಞಾನದಲ್ಲಿ ಅಭಿಲಾಶ್ ಹಾಗೂ ರಾಧಾ ಕೃಷ್ಣನ್ ಗಂಟಿ, ಪರಿಸರ ವಿಜ್ಞಾನ ವಿಷಯದಲ್ಲಿ ಪೂರಬಿ ಸೈಕೈ ಹಾಗೂ ಬಪ್ಪಿ ಪೌಲ್, ಗಣಿತ ಹಾಗೂ ಗಣಕ ವಿಜ್ಞಾನದಲ್ಲಿ ಮಹೇಶ್ ರಮೇಶ್ ಕಾಕಡೆ, ವೈದ್ಯಕೀಯ ಕ್ಷೇತ್ರದಲ್ಲಿ ಜಿತೇಂದ್ರ ಕುಮಾರ್ ಸಾಹು ಹಾಗೂ ಪ್ರಗ್ಯಾ ಧೃವ್ ಯಾದವ್, ಭೌತವಿಜ್ಞಾನದಲ್ಲಿ ಊರ್ವಸಿ ಸಿನ್ಹಾ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ದಿಂಗೇಂದರನಾಥ ಸ್ವೈನ್ ಹಾಗೂ ಪ್ರಶಾಂತ್ ಕುಮಾರ್, ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಭು ರಾಜಗೋಪಾಲ್ ಅವರಿಗೆ ಪ್ರಶಸ್ತಿ ಲಭಿಸಿದೆ.

ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ನೀಡುತ್ತಿದ್ದ ಸುಮಾರು 300ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪರಿಷ್ಕರಿಸಿದ ಸರ್ಕಾರವು, ಅವುಗಳ ಬದಲು ವಿಜ್ಞಾನ ರತ್ನ ಪುರಸ್ಕಾರ ನೀಡಲು ಆರಂಭಿಸಿದೆ. ಇದು ಈ ವರ್ಷದಿಂದಲೇ ಆರಂಭವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರೀಯ ವಿಜ್ಞಾನ ದಿನವಾದ ಆ. 23ರಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಚಂದ್ರನ ದಕ್ಷಿಣ ದೃವದಲ್ಲಿ ಚಂದ್ರಯಾನ–3 ಇಳಿದ ದಿನದ ನೆನಪಿಗಾಗಿ ಆ ದಿನ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.