ನವದೆಹಲಿ:ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ರಚಿಸಲು ಬಿಜೆಪಿಗೆ ಮಿತ್ರ ಪಕ್ಷಗಳ ಸಹಾಯ ಬೇಕಾಗಬಹುದು ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದು, ಇದನ್ನು ಕಾಂಗ್ರೆಸ್ ಲೇವಡಿ ಮಾಡಿದೆ.

ಬ್ಲೂಮ್ಬರ್ಗ್ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಮ್ ಮಾಧವ್, ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿ ಸ್ಪಷ್ಟ ಬಹುಮತ ಗಳಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿಗೆ 271 ಸ್ಥಾನ ದೊರೆತರೆ ಬಹಳ ಸಂತೋಷ. ಎನ್ಡಿಎ ಮೈತ್ರಿಕೂಟಕ್ಕಂತೂಸ್ಪಷ್ಟ ಬಹುಮತ ದೊರೆಯಲಿದೆ. ಪೂರ್ವ ಭಾರತದಲ್ಲಿ ನಮ್ಮ ಪಕ್ಷ ವಿಸ್ತರಣೆಯಾಗುತ್ತಾ ಸಾಗಿದೆ. ಅಲ್ಲಿ ಮಾಡಿರುವ ಪ್ರಯತ್ನವನ್ನೇ ನಾವು ದಕ್ಷಿಣದಲ್ಲೂ ಮಾಡಿದ್ದಿದ್ದರೆ ಇನ್ನಷ್ಟು ಸುಲಭವಾಗುತ್ತಿತ್ತು’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಟೀಕೆ:ಬಿಜೆಪಿಗೆ ಚುನಾವಣಾ ಹತಾಶೆ ಕಾಡುತ್ತಿದೆ ಎಂಬುದು ಅದರ ನಾಯಕರ ಹೇಳಿಕೆಗಳಿಂದ ಗೊತ್ತಾಗುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.

‘ಐದು ಹಂತಗಳ ಚುನಾವಣೆ ಬಳಿಕ ಇದೀಗ ಬಿಜೆಪಿಯು ತನ್ನ ಆಟ ಅಂತ್ಯವಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಪಕ್ಷಕ್ಕೆ ಚುನಾವಣಾ ಹತಾಶೆ, ಆತಂಕ ಕಾಡುತ್ತಿದೆ ಎಂಬುದು ಅದರ ನಾಯಕರ ಹೇಳಿಕೆಗಳಿಂದ ಬಹಿರಂಗವಾಗುತ್ತಿದೆ’ ಎಂದು ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.