ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಕಾರ್ಯದರ್ಶಿ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿರುವುದಾಗಿ ಸೋಮವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದ್ದಾರೆ.

2013ರ ಮುಜಾಫರ್ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಖತೌಲಿ ಶಾಸಕ ವಿಕ್ರಮ್ ಸೈನಿ ಅವರಿಗೆ ಜನ ಪ್ರತಿನಿಧಿ ನ್ಯಾಯಾಲಯವು ಅಕ್ಟೋಬರ್ 11 ರಂದು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಮುಜಾಫರ್ನಗರ ಸಂಸದ/ಶಾಸಕರ ಜನಪ್ರತಿನಿಧಿ ನ್ಯಾಯಾಲಯವು ಸೈನಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ಅಕ್ಟೋಬರ್ 11 ರಿಂದ ಜಾರಿಗೆ ಬರುವಂತೆ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದ್ವೇಷ ಭಾಷಣ ಪ್ರಕರಣದಲ್ಲಿ ಎಸ್ಪಿ ಶಾಸಕ ಅಜಂ ಖಾನ್ಗೆ ಇತ್ತೀಚೆಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ರಾಂಪುರ ಕ್ಷೇತ್ರ ತೆರವಾಗಿರುವುದಾಗಿ ಅಧಿಸೂಚನೆ ಹೊರಡಿಸಿದ್ದರು. ಇದರ ಬೆನ್ನಿಗೇ ವಿಧಾನಸಭೆ ಕಾರ್ಯದರ್ಶಿ ಸತೀಸ್ ಮಹಾನ್ ಅವರಿಗೆ ಪತ್ರ ಬರೆದಿದ್ದ ಆರ್ಎಲ್ಡಿ ನಾಯಕ ಜಯಂತ್ ಚೌಧರಿ, ಅಜಂ ಖಾನ್ ಅವರ ಕ್ಷೇತ್ರ ತೆರವಾಗಿರುವುದಾಗಿ ಘೋಷಣೆ ಮಾಡಿದ್ದೇ ಆದರೆ, ಜೈಲು ಶಿಕ್ಷೆಗೆ ಗುರಿಯಾಗಿರುವ ಸೈನಿ ಅವರನ್ನು ಏಕೆ ಅನರ್ಹ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.