ನವದೆಹಲಿ:ಬಿಜೆಪಿಯ ಅಧಿಕೃತ ವೆಬ್ಸೈಟ್ನಲ್ಲಿ ನಾವು ಅಭಿವೃದ್ಧಿಪಡಿಸಿದ ಟೆಂಪ್ಲೆಟ್ ಕೋಡ್ ಬಳಸಲಾಗಿದೆ ಎಂದು ಆಂಧ್ರಪ್ರದೇಶದ ನವೋದ್ಯಮ (ಸ್ಟಾರ್ಟಪ್) ಕಂಪನಿ ‘ವಿ3ಲೇಔಟ್’ ಆರೋಪಿಸಿದೆ.

‘ಎರಡು ವಾರಗಳಿಂದ ಬಿಜೆಪಿ ವೆಬ್ಸೈಟ್ನಲ್ಲಿ ನಮ್ಮ ಟೆಂಪ್ಲೆಟ್ ಬಳಸಲಾಗಿದೆ. ಆದರೆಕಂಪನಿಯ ಹೆಸರು ಉಲ್ಲೇಖಿಸಿರುವ ಬ್ಯಾಕ್ಲಿಂಕ್ ಅನ್ನು ನಮೂದಿಸುವ ಸೌಜನ್ಯ ತೋರಿಲ್ಲ’ ಎಂದು‘ವಿ3ಲೇಔಟ್’ ದೂರಿದೆ.

ಇದರ ಬೆನ್ನಲ್ಲೇ, ಆ ಕೋಡ್ ಅನ್ನು ವೆಬ್ಸೈಟ್ನಿಂದ ತೆರವು ಮಾಡಲಾಗಿದೆ ಎಂದುಬಿಜೆಪಿ ಸ್ಪಷ್ಟನೆ ನೀಡಿದೆ. ‘ಅದು ಉಚಿತ ಬಳಕೆಯ ಅಪ್ಲಿಕೇಷನ್ ಆಗಿದ್ದರಿಂದ ಬಳಸಿದ್ದೆವು. ಬ್ಯಾಕ್ಲಿಂಕ್ ತೆರವುಗೊಳಿಸಬೇಕು ಎಂದು ಸೂಚನೆ ದೊರೆತ ಬಳಿಕ ಅವರ ಕೋಡ್ ಅನ್ನು ತೆರವುಗೊಳಿಸಿದ್ದೇವೆ.ಬ್ಯಾಕ್ಲಿಂಕ್ ಬದಲಿಗೆ ಹೆಸರು ಉಲ್ಲೇಖಿಸುವುದಾಗಿ ಹೇಳಿದ್ದರೂ ಅದಕ್ಕೆ ಸಮ್ಮತಿಸದಿರುವುದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದ್ದೇವೆ’ ಎಂದು ಬಿಜೆಪಿ ಹೇಳಿದೆ.

‘ಬಿಜೆಪಿಯ ಐಟಿ ಸೆಲ್ ನಮ್ಮ ಟೆಂಪ್ಲೆಟ್ ಬಳಸಿದ್ದು ನೋಡಿ ಆರಂಭದಲ್ಲಿ ಸಂತೋಷವಾಯಿತು. ಆದರೆ, ಬ್ಯಾಕ್ಲಿಂಕ್ ಅನ್ನು ತೆರವು ಮಾಡಿ ಮೂಲವನ್ನು ಉಲ್ಲೇಖಿಸದೇ ಬಳಸಿದ್ದರಿಂದ ಆಘಾತವಾಯಿತು’ ಎಂದು‘ವಿ3ಲೇಔಟ್’ ತನ್ನ ಬ್ಲಾಗ್ನಲ್ಲಿ ಬರೆದುಕೊಂಡಿದೆ.

‘ಬ್ಯಾಕ್ಲಿಂಕ್ ತೆರವು ಮಾಡಿದರೂ ಬಿಜೆಪಿಯು ನಮ್ಮ ಕೋಡ್ ಬಳಸಿಕೊಳ್ಳುತ್ತಿರುವುದು ವೆಬ್ಪೇಜ್ನ ಸೋರ್ಸ್ಕೋಡ್ನಿಂದ ತಿಳಿದುಬಂದಿದೆ’ ಎಂದು ಕಂಪನಿ ಹೇಳಿದೆ.

‘ಈಗ ಅವರು ಆ ಕೋಡ್ ಅನ್ನು ಸಂಪೂರ್ಣ ಬದಲಾಯಿಸಿರಬಹುದು. ಆದರೂ ತಾವು ಚೌಕೀದಾರ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರ ನೇತೃತ್ವದ ಪಕ್ಷವು ಸಣ್ಣ ಕಂಪನಿಯೊಂದು ಶ್ರಮವಹಿಸಿ ಸಿದ್ಧಪಡಿಸಿರುವ ಟೆಂಪ್ಲೆಟ್ ಬಳಸಿರುವುದು ಮತ್ತು ವಂಚನೆ ಎಂಬುದು ಗೊತ್ತಾದ ಕೂಡಲೇ ಅಲ್ಲಗಳೆದಿರುವುದು ಅಚ್ಚರಿಯುಂಟುಮಾಡಿದೆ’ ಎಂದು ಕಂಪನಿ ಹೇಳಿದೆ.

ಇವನ್ನೂ ಓದಿ

*ಗೋವಾ ಬಿಜೆಪಿ ಹಳೆ ವೆಬ್ಸೈಟ್ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಪೋಸ್ಟ್!

*ಪುನರಾರಂಭವಾಗದ ಬಿಜೆಪಿ ಜಾಲತಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.