ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿರುವ ಬೆನ್ನಲ್ಲೇ ಹಲವಾರು ಕುತೂಹಲಕಾರಿ ಅಂಶಗಳು ಬಯಲಾಗಿವೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತ ಗಳಿಸಿರಬಹುದು. ಆದರೆ ಮತ ಪ್ರಮಾಣದಲ್ಲಿ ಕಾಂಗ್ರೆಸ್ ನಿಕಟ ಪೈಪೋಟಿ ಒಡ್ಡಿರುವುದು ಕಂಡುಬಂದಿದೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಶೇ 39.94 ಮತ್ತು ಕಾಂಗ್ರೆಸ್ ಶೇ 39.09ರಷ್ಟು ಮತ ಗಳಿಸಿದೆ.

ಚುನಾವಣಾ ಫಲಿತಾಂಶಗಳ ಪ್ರಕಾರ ಎರಡೂ ಪಕ್ಷಗಳು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಗಿಟ್ಟಿಸಿವೆ. ಕಳೆದ ಬಾರಿಗಿಂತ ಕಾಂಗ್ರೆಸ್ ಶೇ 11 ಮತ್ತು ಬಿಜೆಪಿ ಶೇ 3ರಷ್ಟು ಮತಗಳ ಗಮನಾರ್ಹ ಏರಿಕೆ ಕಂಡಿವೆ.

2019ರಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಗೆದ್ದಿತ್ತು. ಅಂದು ಶೇ 36.49ರಷ್ಟು ಮತಗಳನ್ನು ಪಡೆದಿತ್ತು. ಕಾಂಗ್ರೆಸ್ ಕಳೆದ ಬಾರಿ 31 ಸ್ಥಾನಗಳನ್ನು ಗಳಿಸಿತ್ತು. ಅದು ಶೇ 29.08ರಷ್ಟು ಮತಗಳನ್ನು ಪಡೆದಿತ್ತು.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಈ ಬಾರಿ ಸರಳ ಬಹುಮತ ಗಳಿಸಿರುವ ಬಿಜೆಪಿ (48) ಸರ್ಕಾರ ರಚನೆಯತ್ತ ದಾಪುಗಾಲು ಇಟ್ಟಿದೆ. ಕಾಂಗ್ರೆಸ್ 37 ಸ್ಥಾನಗಳನ್ನು ಪಡೆದಿವೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ತಲಾ ಐದು ಸ್ಥಾನಗಳಲ್ಲಿ ಜಯಿಸಿದ್ದವು. ಬಿಜೆಪಿ ಶೇ 46.11 ಮತ್ತು ಕಾಂಗ್ರೆಸ್ ಶೇ 43.67ರಷ್ಟು ಮತ ಗಳಿಸಿತ್ತು.
.ಸಂಪಾದಕೀಯ | ಹರಿಯಾಣ, ಕಾಶ್ಮೀರ ಫಲಿತಾಂಶ: BJPಗೆ ಹುರುಪು, ಕಾಂಗ್ರೆಸ್ಗೆ ಹಿನ್ನಡೆ.ಹರಿಯಾಣ ಫಲಿತಾಂಶ; ECI ವೆಬ್ಸೈಟ್ಗೆ ನಿಧಾನಗತಿಯಲ್ಲಿ ಅಪ್ಲೋಡ್: ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.