ಹೈದರಾಬಾದ್: ಕಾಮಾರೆಡ್ಡಿ ಕ್ಷೇತ್ರದಲ್ಲಿ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಸೋಲಿಸಿದ್ದಾರೆ.

ವೆಂಕಟರಮಣ ರೆಡ್ಡಿ ಅವರು ಕೆಸಿಆರ್ ಅವರಿಗಿಂತ 6,741 ಹೆಚ್ಚು ಮತಗಳನ್ನು ಪಡೆದು, ಗೆಲುವಿನ ನಗೆ ಬೀರಿದ್ದಾರೆ. ‘ಈ ಕ್ಷೇತ್ರದಲ್ಲಿ ದೊಡ್ಡ ನಾಯಕರು ಸ್ಪರ್ಧಿಸಿದ್ದರಿಂದ ಕ್ಷೇತ್ರವು ಹೆಚ್ಚಿನ ಗಮನ ಸೆಳೆದಿತ್ತು. ಕೆಸಿಆರ್ ಮತ್ತು ರೇವಂತ್ ರೆಡ್ಡಿ ವಿರುದ್ಧ ಗೆಲುವು ಸಾಧಿಸುವ ಅದೃಷ್ಟ ನನ್ನದಾಗಿತ್ತು’ ಎಂದು ವೆಂಕಟರಮಣ ರೆಡ್ಡಿ ಹೇಳಿದ್ದಾರೆ.

‘ಹಣ ಮತ್ತು ಹೆಂಡ ಇರದಿದ್ದರೂ ಜನ ಮತ ನೀಡುತ್ತಾರೆ. ಜನರು ಭ್ರಷ್ಟರಲ್ಲ, ನಾಯಕರು ಭ್ರಷ್ಟರು ಎಂಬುದು ನನ್ನ ನಂಬಿಕೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.