ಪ್ರಕ್ಷುಬ್ಧ ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಜನರಿಗೆ ದಾರಿತೋರಬಲ್ಲ, ಏಕತೆ ಮೂಡಿಸಬಲ್ಲ, ಧ್ಯೇಯವನ್ನು ರೂಪಿಸಬಲ್ಲ ಮತ್ತು ಸ್ಫೂರ್ತಿದಾಯಕ ಮಾರ್ಗದರ್ಶಕನಾಗಬಲ್ಲ ನಾಯಕನನ್ನು ಒಂದು ದೇಶ ಪಡೆಯುತ್ತದೆ ಅಂದರೆ, ಅದು ಆ ದೇಶಕ್ಕೆ ದೊರೆತಿರುವ ಆಶೀರ್ವಾದವೇ ಸರಿ. ಶತಮಾನವೊಂದರಿಂದ ಮತ್ತೊಂದು ಶತಮಾನಕ್ಕೆ ಹೊರಳಿಕೊಳ್ಳುತ್ತಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಚುಕ್ಕಾಣಿ ಹಿಡಿದರು.

ಸ್ವಾತಂತ್ರ್ಯ ಸಂಗ್ರಾಮ ಗರಿಗೆದರುತ್ತಿದ್ದ ಸಮಯವದು. ಜನಸೇವೆಯ ಬಗೆಗಿನ ತುಡಿತ ಅವರ ಯೌವ್ವನದ ದಿನಗಳನ್ನು ರೂಪಿಸಿತು. ಜನಸಂಘದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಬದುಕನ್ನು ಆರಂಭಿಸಿದರು. ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ ದಯಾಳ್ ಉಪಾದ್ಯಾಯ ಅವರ ನಂತರ ಸ್ವತಂತ್ರ ಭಾರತದ ಏಕೈಕ ಮತ್ತು ನೈಜ ರಾಷ್ಟ್ರೀಯ ಪಕ್ಷವಾದ ಬಿಜೆಪಿಯನ್ನು ಸಂಘಟಿಸಿದ ಶ್ರೇಯ ಅಟಲ್ಜೀ ಅವರಿಗೆ ಸಲ್ಲುತ್ತದೆ.

ಸಂಸತ್ತಿನಲ್ಲಿ ನಾಲ್ಕು ದಶಕಗಳ ಪ್ರಾತಿನಿಧ್ಯ, ತುರ್ತುಪರಿಸ್ಥಿಯ ವಿರುದ್ಧದ ಅವರ ಹೋರಾಟ ಅಭೂತಪೂರ್ವವಾದುದು. ಸದಾ ದೇಶಕ್ಕಾಗಿ ದುಡಿಯುತ್ತಿದ್ದರೂ, ತನ್ನ ಪಕ್ಷದ ನಿಲುವಿನ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ತನ್ನ ನಿಲುವಿಗೆ ಸದಾ ಬದ್ಧರಾಗಿದ್ದರೂ, ಇತರ ರಾಜಕೀಯ ಸಿದ್ಧಾಂತಗಳನ್ನು ಗೌರವಿಸುತ್ತಿದ್ದರು. ಸಂಸತ್ತಿನೊಳಗೆ ಚರ್ಚೆಯ ಗುಣಮಟ್ಟವನ್ನು ಹೆಚ್ಚಿಸಿದರು. ಆ ಮೂಲಕಭಾರತದ ಪ್ರಜಾಪ್ರಭುತ್ವದ ಆತ್ಮವನ್ನು ನಿಚ್ಚಳಗೊಳಿಸಿದರು.

ಭಾರತವು ಜಾಗತಿಕ ನಾಯಕನಾಗುವುದರ ಪಯಣದ ಮೊದಲ ಹೆಜ್ಜೆಗಳನ್ನು ಇರಿಸಿದ ಶ್ರೇಯ ಅವರಿಗೇ ಸಲ್ಲಬೇಕು.

ದೂರದೃಷ್ಟಿಯುಳ್ಳ ಆರ್ಥಿಕ ನೀತಿಗಳು ಮತ್ತು ಆಡಳಿತಾತ್ಮಕ ಸುಧಾರಣೆಗಳ ಮೂಲಕ ಭಾರತೀಯತೆಯನ್ನು ಉಚ್ಛ್ರಾಯಸ್ಥಿತಿಗೆ ಕೊಂಡೊಯ್ದರು. ರಸ್ತೆ–ಹೆದ್ದಾರಿ ಮತ್ತು ದೂರಸಂಪರ್ಕ ಕ್ಷೇತ್ರಕ್ಕೆ ಅವರು ನೀಡಿದ ಆದ್ಯತೆಯಿಂದಲೇ ಭಾರತವು ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣ ಸಾಧಿಸಿತು. ಅಮೆರಿಕ, ಪಾಕಿಸ್ತಾನ, ಚೀನಾ ಜತೆಗಿನ ಸಂಬಂಧಗಳನ್ನು ಸುಧಾರಿಸಿದರು.ಭಾರತವು ನಡೆಯ ಬೇಕು ಎಂದು ಅಟಲ್ಜೀ ಅವರು ಬಯಸುತ್ತಿದ್ದ ಹಾದಿಯಲ್ಲೇ ನಾವು ಇಂದು ನಡೆಯುತ್ತಿದ್ದೇವೆ.

ಅಟಲ್ ಜೀ ತಮ್ಮ ಕಾಲಕ್ಕಿಂತ ಸದಾ ಒಂದು ಹೆಜ್ಜೆ ಮುಂದಿದ್ದರು. ಜೀವಜ್ಯೋತಿ ಆರಿದಾಗ, ವ್ಯಕ್ತವಾಗುವ ದುಃಖದಿಂದ ಮಾತ್ರವೇ ಆ ಜೀವದ ಮಹತ್ವವನ್ನು ಅಳೆಯಲು ಸಾಧ್ಯವಿಲ್ಲ.ನಾವು ಅವರ ಕನಸಿನಂತೆ ನವ ಭಾರತವನ್ನು ನಿರ್ಮಿಸು
ತ್ತಿದ್ದು, ಅವರ ಆತ್ಮ ನಮಗೆ ಸದಾ ಮಾರ್ಗದರ್ಶಿಯಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.