ಪ್ರಯಾಗ್‌ರಾಜ್: ಗುಂಡೇಟಿನಿಂದ ಹತ್ಯೆಯಾದ ಪಾತಕಿ ಮತ್ತು ರಾಜಕಾರಣಿ ಅತೀಕ್ ಅಹ್ಮದ್ ಕಚೇರಿಯ ಗೋಡೆಗಳಲ್ಲಿ ರಕ್ತದ ಕಲೆಗಳು, ರಕ್ತಸಿಕ್ತ ಬಟ್ಟೆ ಮತ್ತು ರಕ್ತದ ಕಲೆ ಅಂಟಿರುವ ಚಾಕುವನ್ನು ಪೊಲೀಸರು ಸೋಮವಾರ ಪತ್ತೆ ಮಾಡಿದ್ದಾರೆ.

ಉತ್ತರಪ್ರದೇಶ ಜಿಲ್ಲೆಯ ಚಾಕಿಯಾದಲ್ಲಿರುವ ಅತೀಕ್ ಅವರ ಕಚೇರಿಯಲ್ಲಿ ರಕ್ತದ ಕಲೆಗಳಿರುವ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ರಕ್ತದ ಕಲೆಗಳು ಮನುಷ್ಯನದ್ದೇ ಅಥವಾ ಪ್ರಾಣಿಯದ್ದೇ ಎನ್ನುವುದು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರವಷ್ಟೇ ಖಚಿತಪಡಲಿದೆ ಎಂದು ಡಿಸಿಪಿ ದೀಪಕ್ ಭುಕರ್ ಸುದ್ದಿಗಾರರಿಗೆ ತಿಳಿಸಿದರು.

ಅತೀಕ್ ಅಹ್ಮದ್‌ನ ಕಚೇರಿಯ ಮುಂಭಾಗವನ್ನು ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರವು (ಪಿಡಿಎ) ಬುಲ್ಡೋಜರ್ ಬಳಸಿ ಬಹಳ ಹಿಂದೆಯೇ ನೆಲಸಮಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.